ಬಿಹಾರ:ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕಾರನ್ನು ತಡೆಗಟ್ಟಿದ್ದ ಹಿನ್ನಲೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ಚೌಬೆ ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಕಾರಿನ ಸೀಟಿನ ಮುಂಭಾಗ ಕುಳಿತುಕೊಂಡಿದ್ದ ಕೇಂದ್ರ ಸಚಿವರು ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿದಲ್ಲದೇ, ಅಧಿಕಾರಿಗಳೊಂದಿಗೆ ಆಕ್ರೋಶಭರಿತವಾಗಿ ಮಾತನಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಯಾವ ವಿವಾದ ? ಇದನ್ನ ಯಾರು ಆದೇಶ ಮಾಡಿತ್ತು , ಏನಾದರೂ ಆಗಿದಲ್ಲೀ ಜೈಲಿನ ಕಳುಹಿಸಿ, ಇದು ನನ್ನ ಕಾರು ವಶಕ್ಕೆ ಪಡೆಯಲು ಸಾಧ್ಯವಿಲ್ಲ ಎಂದು ಚೌಬೆ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ ಡಿಎಂ ಕೆಕೆ ಉಪಾಧ್ಯಾಯ , ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ವಾಹನಗಳಿಗೆ ಯಾವುದೇ ಅನುಮತಿ ನೀಡಿಲ್ಲ. ಆದರೆ, ಜಿಲ್ಲಾ ಮೈದಾನದಲ್ಲಿ ಹಲವು ವಾಹನಗಳು ನಿಂತಿದ್ದ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಬಕ್ಸಾರ್ ಕ್ಷೇತ್ರದ ಸಂಸದರಾಗಿರುವ ಅಶ್ವಿನಿ ಕುಮಾರ್ ಚೌಬೆ 2019 ಲೋಕಸಭಾ ಚುನಾವಣೆಯಲ್ಲೂ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.