ಮದೀನಾ: ಉಮ್ರಾ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ಸಂಭವಿಸಿದ ಕಾರಣ, ಪ್ರವಾದಿ ನಗರವಾದ ಮಸ್ಜಿದುನ್ನಬವಿ ಯಲ್ಲಿನ ಮಹಿಳೆಯರ ಭೇಟಿ ಸಮಯವನ್ನು ಬದಲಾಯಿಸಲಾಗಿದೆ ಎಂದು ಹರಂ ಖಾತೆಯ ಸಚಿವಾಲಯ ತಿಳಿಸಿದೆ. ಹೊಸ ಸಮಯ ಬದಲಾವಣೆ ಪ್ರಯುಕ್ತ ಮಹಿಳೆಯರಿಗೆ ಹೆಚ್ಚು ಸಂದರ್ಶನ ಸಮಯ ಲಭ್ಯವಾಗಲಿದೆ.
ಸುಬಹಿ ನಮಾಝಿನ ಬಳಿಕ ಝುಹರ್ ನಮಾಝಿನ ಒಂದು ಗಂಟೆ ಮುಂಚಿನ ವರೆಗೆ ಮತ್ತು, ಇಶಾ ನಮಾಝಿನ ಬಳಿಕ ಸುಬಹಿ ನಮಾಝಿಗೆ ಒಂದು ಗಂಟೆ ಮುಂಚೆಯ ವರೆಗೆ ರೌಳಾಗೆ ಭೇಟಿ ನೀಡಲು ಅನುಮತಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.