janadhvani

Kannada Online News Paper

ಜಗತ್ತಿನಲ್ಲಿ ಅತ್ಯಧಿಕ ವಿಧೇಶೀಯರಿರುವ ಮೂರನೇ ಅತಿದೊಡ್ಡ ದೇಶ ಸೌದಿ ಅರೇಬಿಯಾ

ರಿಯಾದ್: ವರ್ಲ್ಡ್ ಎಕನಾಮಿಕ್ ಫೋರಂನ ವರದಿಯಂತೆ ಜಗತ್ತಿನಲ್ಲಿ ಅತ್ಯಧಿಕ ವಿಧೇಶೀಯರಿರುವ ಮೂರನೇ ಅತಿದೊಡ್ಡ ದೇಶ ಸೌದಿ ಅರೇಬಿಯಾ ಆಗಿದೆ. ಅಮೆರಿಕ ವಿಶ್ವದಲ್ಲೇ ಅತಿ ಹೆಚ್ಚು ವಿದೇಶಿಯರಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ವರ್ಲ್ಡ್ ಎಕನಾಮಿಕ್ ಫೋರಂನ ಪ್ರಕಾರ ಸೌದಿ ಅರೇಬಿಯಾದಲ್ಲಿ 10.8 ದಶಲಕ್ಷ ವಲಸಿಗರಿದ್ದಾರೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ವಾಸಿಸುತ್ತಿರುವ ವಿದೇಶಿಯರ ಸಂಖ್ಯೆಯು 48.2 ಮಿಲಿಯನ್ ಎಂದು ವರದಿ ತಿಳಿಸಿದೆ. ರಷ್ಯಾದಲ್ಲಿ 11.6 ಮಿಲಿಯನ್ ವಿದೇಶಿಯರಿದ್ದು, ಅದು ದ್ವಿತೀಯ ಸ್ಥಾನದಲ್ಲಿದೆ.

ಸೌದಿ ಅರೇಬಿಯಾದಲ್ಲಿರುವ ವಲಸಿಗರ ಸಂಖ್ಯೆಯ ಕುರಿತು ವರ್ಲ್ಡ್ ಎಕನಾಮಿಕ್ ಫೋರಂ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಕಳೆದ ವರ್ಷ ಜನರಲ್ ಅಥಾರಿಟಿ ಫಾರ್ ಸ್ಟ್ಯಾಟಿಸ್ಟಿಕ್ಸ್ ಬಿಡುಗಡೆ ಮಾಡಿದ ಸಂಖ್ಯೆಯನ್ನು ಹೋಲುತ್ತಿವೆ.

ಸೌದಿ ಪ್ರಾಧಿಕಾರದ ಪ್ರಕಾರ, ಸೌದಿ ಅರೇಬಿಯಾದಲ್ಲಿ 1,06,66,475 ವಲಸಿಗರಿದ್ದು, ಇದರಲ್ಲಿ ಖಾಸಗಿ ವಲಯದಲ್ಲಿ 80,89,976 ಜನರು ಉದ್ಯೋಗ ಹೊಂದಿದ್ದಾರೆ ಮತ್ತು 9,16,768 ಜನರು ಸರ್ಕಾರೀ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದಲ್ಲಿ 16,59,729 ವಿಧೇಶೀ ಕಾರ್ಮಿಕರು ಮನೆ ಕೆಲಸದವರಾಗಿ ದುಡಿಯುತ್ತಿದ್ದಾರೆ.

ಕಳೆದ ವರ್ಷ,ಸಮಾಜ ಕಲ್ಯಾಣ ಮತ್ತು ಸಬಲೀಕರಣ ಸಚಿವಾಲಯವು ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ ಅಲ್ಲಿ ಕೆಲಸ ಮಾಡುವವರ ಪೈಕಿ ಹೆಚ್ಚಿನವರು ಭಾರತೀಯರು ಎಂದು ಸೌದಿ ಬಹಿರಂಗಪಡಿಸಿದೆ.

error: Content is protected !! Not allowed copy content from janadhvani.com