ಉಡುಪಿ: ಕೋಮುವಾದದ ವಿಷ ಬೀಜ ಬಿತ್ತುವ ಹಾಗೂ ಜನವಿರೋಧಿ ಬಿಜೆಪಿ ಅಧಿಕಾರದ ಗುದ್ದುಗೆ ಏರಬಾರದೆನ್ನುವ ಏಕೈಕ ಉದ್ದೇಶದಿಂದ ಸಮ್ಮಿಶ್ರ ಸರಕಾರ ರಚನೆ ಮಾಡಿ ಮೈತ್ರಿಮುಂದುವರಿಸಿದ್ದೇವೆ ಎಂದು ರಾಜ್ಯ ಕೈಗಾರಿಕೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಇತ್ತೀಚಿನ ಕಾಮೆಂಟ್ಡಿ.ಕೆ.ರವಿ ಮತ್ತು ಗಣಪತಿ ಇಬ್ಬರ ಕೊಲೆಗಡುಕರಿಗೆ ಕೋಮುವಾದದ ಬಗ್ಗೆ ಮಾತನಾಡಲು ಹಕ್ಕಿಲ್ಲ.ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿಯಲ್ಲಿ ಮಾತ್ರವೇ ಹಿಂದೂಗಳು ಇರುವುದಲ್ಲ. ಪ್ರಮೋದ್ ಮಧ್ವರಾಜ್, ಡಾ. ಜಯಮಾಲಾ ಸಹಿತ ಕಾಂಗ್ರೆಸ್‌ನ ಬಹುತೇಕ ಮಂದಿ ಹಿಂದೂಗಳೇ. ನಮ್ಮಲ್ಲಿ ಕ್ರೈಸ್ತ, ಮುಸ್ಲಿಂ, ಜೈನ, ಅಲ್ಪಸಂಖ್ಯಾತರಿದ್ದೇವೆ. ಕಾಂಗ್ರೆಸ್ ಯಾರಿಗೂ ಮೋಸ ಮಾಡಿಲ್ಲ. ಮೈತ್ರಿ ಧರ್ಮದಂತೆ ಕೆಲ ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದೇವೆ. ಇದರ ಮೂಲ ಉದ್ದೇಶವೇ ಕೋಮುವಾದಿ ಬಿಜೆಪಿಯನ್ನು ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳುವುದು ಎಂದರು.
ಮೋದಿ ಅಭಿವೃದ್ಧಿ ಕೆಲಸ ಮಾಡಿಲ್ಲ. ನಿರುದೋಗ್ಯ ಹೆಚ್ಚಳವಾಗಿದೆ. ನೋಟ್ ಅಮಾನ್ಯ, ಜಿಎಸ್‌ಟಿಯಿಂದಾಗಿ ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಜನರಿಗೆ ಅರಿವು ಆಗಿದ್ದು, ನಮ್ಮ ಪಕ್ಷಕ್ಕೆ ಮತ ಚಲಾಯಿಸುವ ವಿಶ್ವಾಸವಿದೆ ಎಂದರು.