janadhvani

Kannada Online News Paper

ರಂಝಾನ್‌ ಸ್ವಾಗತಕ್ಕಾಗಿ ಹರಂ ಶರೀಫ್ ಸಜ್ಜಾಗುತ್ತಿದೆ – ಮಕ್ಕಾ ಗವರ್ನರ್

ಮಕ್ಕಾ: ಪವಿತ್ರ ಮಕ್ಕಾದಲ್ಲಿ ರಂಝಾನ್‌ಗೆ ಸ್ವಾಗತ ನೀಡುವ ಕ್ರಮಗಳಿಗೆ ರೂಪುರೇಷೆ ನೀಡಲಾಗಿದ್ದು, ಎಲ್ಲಾ ಇಲಾಖೆಗಳ ಸಹಯೋಗದೊಂದಿಗೆ ಯಾತ್ರಾರ್ಥಿಗಳಿಗೆ ಸಕಲ ಸೌಕರ್ಯಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ.

ಮಕ್ಕಾದ ಗವರ್ನರ್ ಅಮೀರ್ ಖಾಲಿದ್ ಅಲ್-ಫೈಝಲ್ ಅವರು ಉಮ್ರಾ ಯಾತ್ರಿಕರಿಗೆ ನೀಡಲಾಗುವ ಸೇವೆಗಳನ್ನು ಪರೀಕ್ಷಿಸುವಂತೆ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ತಿಳಿಸಿದ್ದಾರೆ.

ರಮಝಾನ್ ಋತುವಿನಲ್ಲಿ ಈ ಹಿಂದೆ ಆಗಮಿಸುತ್ತಿದ್ದ ಯಾತ್ರಕರಿಂತ 10 ಪಟ್ಟು ಹೆಚ್ಚಿನ ಯಾತ್ರಿಕರು ಆಗಮಿಸಲಿದ್ದಾರೆ. ಎರಡು ಹರಂಗಳಲ್ಲಿ ಈ ಋತುವಿನಲ್ಲಿ 75 ಲಕ್ಷ ಯಾತ್ರಿಕರು ಆಗಮಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಯಾತ್ರಾರ್ಥಿಗಳ ಸೇವೆಗಾಗಿ 12000 ಉದ್ಯೋಗಿಗಳು ಮತ್ತು ಸ್ವಚ್ಛಗೊಳಿಸುವ ಸಲುವಾಗಿ 876 ಉಪಕರಣಗಳನ್ನು ಸಜ್ಜುಗೊಳಿಸಲಾಗಿದೆ.

ಮಕ್ಕಾದಲ್ಲಿನ 58 ಸುರಂಗಗಳ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು. ಹರಂನಲ್ಲಿ 400 ಜನರನ್ನು ತಾತ್ಕಾಲಿಕ ವೀಕ್ಷಕರಾಗಿ ನೇಮಕಗೊಳಿಸಲಾಗಿದೆ. ಯಾತ್ರಿಕರ ಸುರಕ್ಷತೆಗಾಗಿ ಹತ್ತು ಸಾವಿರ ತಾತ್ಕಾಲಿಕ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತಿದ್ದು, ಹಜ್ ಸಚಿವಾಲಯವು ಸಿದ್ಧತೆಯ ನಿರೀಕ್ಷಣೆಗಾಗಿ ವಿಶೇಷ ತಂಡವನ್ನು ನೇಮಿಸಿದೆ.

error: Content is protected !! Not allowed copy content from janadhvani.com