ಹೊಸದಿಲ್ಲಿ: ಈ ತಿಂಗಳಿನಿಂದ ವಿಮಾನ ಟಿಕೆಟ್ ದರಗಳು ಏರಿಕೆಯಾಗಲಿದೆ ಎಂದು ಆ ರಂಗದಲ್ಲಿನ ಪರಿಣಿತರು ಹೇಳುತ್ತಾರೆ.ಈ ತಿಂಗಳ ಪ್ರಾರಂಭದಿಂದ ವಾಯುಯಾನ ಟರ್ಬೈನ್‌ಗೆ 10 ಶೇಕಡಾ ಏರಿಕೆಯಾಗಿದೆ.
ಇಂಧನ ಬೆಲೆ ಏರಿಕೆ ಜೊತೆಗೆ ರಜಾದಿನಗಳು ಕೂಡ ಬರುತ್ತಿದ್ದು, ವಿಮಾನಗಳಿಗೆ ಬಿಡುವಿಲ್ಲದ ಸಮಯವಾಗಿದೆ. ಸೀಝನ್ ಅನುಸಾರ ದರ ಹೆಚ್ಚಳ ಮಾಡುವ ಸಂಪ್ರದಾಯದ ಜೊತೆಗೆ, ಇಂಧನ ಬೆಲೆ ಏರಿಕೆಯ ಹೊರೆಯನ್ನು ಪ್ರಯಾಣಿಕರ ಮೇಲೆ ಕಂಪೆನಿಗಳು ಹೇರುವಾಗ ವಲಸಿಗರ ಯಾತ್ರೆಯ ಮೇಲೆ ಅದು ಪರಿಣಾಮ ಬೀರಲಿದೆ. ಹಲವಾರು ಏರ್ಲೈನ್ಸ್ ಕಂಪೆನಿಗಳು ಈಗಾಗಲೇ ತೀವ್ರ ತೊಂದರೆಗಳನ್ನು ಎದುರಿಸುತ್ತಿದೆ ಎಂದು ತಜ್ಞರು ಹೇಳುತ್ತಾರೆ.
ಆರ್ಥಿಕ ಮುಗ್ಗಟ್ಟು ಮುಂದಿರಿಸಿ, ಜೆಟ್ ಏರ್ವೇಸ್ ಇತ್ತೀಚೆಗೆ ತನ್ನ 19 ವಿಮಾನಗಳ ಸೇವೆಗಳನ್ನು ರದ್ದುಪಡಿಸಿದೆ. ಇಂಡಿಗೊ ಸಹ ಸೇವೆಗಳನ್ನು ಕಡಿತಗೊಳಿಸಿದ್ದು, ಪೈಲಟ್‌ಗಳ ಕೊರತೆಯಿಂದಾಗಿ ಕಡಿತಗೊಳಿಸಲಾಗಿದೆ ಎಂದು ಇಂಡಿಗೊ ವಿವರಿಸಿದೆ. ಇದು ಏಪ್ರಿಲ್ ವರೆಗಿನ ತಾತ್ಕಾಲಿಕ ನಿಯಂತ್ರಣ ಎಂದು ಹೇಳಿದೆ. ವಿಮಾನಗಳು ಕಡಿಮೆ ಇರುವಾಗ ಸೀಝನ್ ಅನುಸಾರ ಕಂಪನಿಗಳು ಮತ್ತೆ ಶುಲ್ಕವನ್ನು ಏರಿಸಲಿದೆ.