janadhvani

Kannada Online News Paper

ಮುಸ್ಲಿಂ ಪುರುಷ-ಹಿಂದೂ ಮಹಿಳೆ ನಡುವಿನ ವಿವಾಹ ಅಮಾನ್ಯ: ಸುಪ್ರೀಂ ಕೋರ್ಟ್

ದೆಹಲಿ: ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆ ನಡುವಿನ  ವಿವಾಹಕ್ಕೆ ಮಾನ್ಯತೆ ಇಲ್ಲ. ಆದರೆ ಆ ದಂಪತಿಗೆ ಜನಿಸಿದ ಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲು ಪಡೆಯಬಹುದು ಎಂದು ಸುಪ್ರಿಂ ಕೋರ್ಟ್​ ಹೇಳಿದೆ.

ಮೊಹಮ್ಮದ ಇಲಿಯಾಸ್ ಮತ್ತು ವಲಿಯಮ್ಮ ( ಮದುವೆ ಸಮಯದಲ್ಲಿ ಹಿಂದೂ ಆಗಿದ್ದ) ಎಂಬ ದಂಪತಿಯ ಪುತ್ರನ ಪ್ರಕರಣದಲ್ಲಿ ಕೇರಳ ಹೈ ಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದ ನ್ಯಾಯಮೂರ್ತಿಗಳಾದ ಎನ್. ವಿ. ರಮಣ ಹಾಗೂ ಮೋಹನ ಎಂ ಶಾಂತನಗೌಡರ್ ಅವರನ್ನೊಳಗೊಂಡ ದ್ವಿ ಸದಸ್ಯ ಪೀಠ ಈ ಸ್ಪಷ್ಟನೆ ನೀಡಿದೆ. 

ಹಿಂದೂ ಧರ್ಮೀಯರು ಮೂರ್ತಿ ಪೂಜಕರು. ಹೂವುಗಳ ಮೂಲಕ ಅಲಂಕಾರ ಮಾಡಿ ವಿಗ್ರಹಾರಾಧಾನೆಯನ್ನು ಮಾಡುವುದರಿಂದ, ಮುಸ್ಲಿಂ ವ್ಯಕ್ತಿಯೊಂದಿಗಿನ ಹಿಂದೂ ಮಹಿಳೆಯ ಮದುವೆಯು ಅಮಾನ್ಯ ಎಂದು ಹೇಳಿದೆ. ಕಾನೂನು ಪ್ರಕಾರ ಈ ಮದುವೆಗೆ ಮಾನ್ಯತೆ ಇಲ್ಲ ಎಂದು ಕೋರ್ಟ್​ ಹೇಳಿದೆ.ಮಾನ್ಯತೆ ವಿವಾಹ, ಮಾನ್ಯತೆ ಇಲ್ಲದ ವಿವಾಹದ ಬಗ್ಗೆ ಮುಸ್ಲಿಂ ಕಾನೂನಿನಲ್ಲಿ ಸ್ಪಷ್ಟಪಡಿಸಲಾಗಿದ್ದು, ಹಿಂದೂ ಮಹಿಳೆಯೊಂದಿಗೆ ವಿವಾಹವಾಗಿದ್ದ ಮುಸ್ಲಿಂ ಪುರುಷನಿಗೆ ಹುಟ್ಟಿದ ಮಕ್ಕಳು ಕಾನೂನುಬದ್ಧರಾಗಿದ್ದು, ತಂದೆಯ ಆಸ್ತಿಯಲ್ಲಿ ಪಾಲು ಪಡೆದುಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಇಲಿಯಾಸ್ ಮೃತ ಪಟ್ಟ ಬಳಿಕ ಆತನ ಮಗ ಶಂಶುದ್ದೀನ್ ತಂದೆಗೆ ವಂಶಪಾರಂಪರ್ಯವಾಗಿ ಬಂದ ಆಸ್ತಿಯಲ್ಲಿ ಪಾಲು ಕೇಳಿದ್ದ. ಆದರೆ ಇಲಿಯಾಸ್ ಸಹೋದರರು ಈ ವಿವಾಹಕ್ಕೆ ಮಾನ್ಯತೆ ಇಲ್ಲ, ಆಸ್ತಿ ಕೊಡಲಾಗದು ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ನಲ್ಲಿ ಶಂಶುದ್ದೀನ್‌ಗೆ ಗೆಲುವಾಗಿದ್ದರಿಂದ ಇಲಿಯಾಸ್ ಸಹೋದರರು ಸುಪ್ರೀಂ ಕದ ತಟ್ಟಿದ್ದರು.