janadhvani

Kannada Online News Paper

ಎಸ್ಸೆಸ್ಸೆಫ್ ಕೊಪ್ಪಳ ಜಿಲ್ಲೆ:ಜನಸಾಗರವಾಯಿತು ಗ್ರಾಂಡ್ ಸುನ್ನಿ ಇಜ್ತಿಮಾ ಹಾಗೂ ಮುಸ್ಲಿಂ ಜಮಾಅತ್ ಪ್ರಚಾರ ಸಮಾವೇಶ

ಗಂಗಾವತಿ: ಎಸ್ಸೆಸ್ಸೆಫ್ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಗಂಗಾವತಿಯ kbn ಗಾರ್ಡನ್ ನಲ್ಲಿ ನಡೆದ ಏಕದಿನ ಗ್ರ್ಯಾಂಡ್ ಸುನ್ನಿ ಇಜ್ತಿಮಾ ಹಾಗೂ ಮುಸ್ಲಿಂ ಜಮಾಅತ್ ಪ್ರಚಾರ ಸಮಾವೇಶಕ್ಕೆ ಜಿಲ್ಲೆಯ ಜನಸಾಗರ ಸಾಕ್ಷಿಯಾಯಿತು.

ಬೆಳಿಗ್ಗೆ ಎಂಟರಿಂದ ರಾತ್ರಿ ಹತ್ತು ಗಂಟೆಯ ವರೆಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ 5 ಡಿವಿಷನ್ ಗಳ 40ಕ್ಕೂ ಮಿಕ್ಕ ಹಳ್ಳಿಗಳ 2000 ಕ್ಕೂ ಮಿಕ್ಕ ಕಾರ್ಯಕರ್ತರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮೌಲಾನ ಅಝ್ಮತುಲ್ಲಾ ಖಾನ್ ರಝ್ವಿ ಬೆಂಗಳೂರು,ಆದಂ ಸಖಾಫಿ ಚಿತ್ರದುರ್ಗ ಹಾಗೂ ಮೌಲಾನ ಜಾಫರ್ ಖಾನ್ ಖಾದ್ರಿ ರಾಯಚೂರು ಉರ್ದು ಭಾಷೆಯಲ್ಲಿ ಭಾಷಣ ಮಾಡಿದರೆ ಮೌಲಾನ ಅಬೂ ಸುಫ್ಯಾನ್ ಮದನಿ, ಡಾ.ಅಬ್ದುರ್ರಶೀದ್ ಝೈನಿ, ಮುಸ್ತಫ ನಈಮಿ ಹಾಗೂ ಹಾಫಿಝ್ ಸುಫ್ಯಾನ್ ಸಖಾಫಿ ಕನ್ನಡ ಭಾಷೆಯಲ್ಲಿ ವಿವಿಧ ವಿಷಯಗಳಲ್ಲಿ ಭಾಷಣ ಮಾಡಿದರು.

ಸಮಾರೋಪ ಸಮಾವೇಶದಲ್ಲಿ ಅಲ್ ಖಾದಿಸ ಕಾವಳಕಟ್ಟೆಯ ಶಿಲ್ಪಿ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಮುಖ್ಯ ಭಾಷಣ ಮಾಡಿದರು.

ಎಸ್ಸೆಸ್ಸೆಫ್ ಕೊಪ್ಪಳ ಜಿಲ್ಲೆಯ ನೂತನ ಸಾರಥಿ ಗಳಿಗೆ ಕಾವಳಕಟ್ಟೆ ಹಝ್ರತ್ ಧ್ವಜ ಹಸ್ತಾಂತರಿಸಿದರು.

ಸಯ್ಯಿದ್ ಜೀಲಾನ್ ಪಾಷಾ ಖಾದ್ರಿ ಗಂಗಾವತಿ, ಸಜ್ಜಾದ್ ಆಲಂ ನೂರಿ, ಸಯ್ಯಿದ್ ಷಾ ಗೇಸುದರಾಸ್ ಖಾದ್ರಿ ಕಂಪ್ಲಿ, ಸ್ವಾಗತ ಸಮಿತಿ ಕನ್ವೀನರ್ ಮೆಹಬೂಬ್ ಖಾನ್ ಸಿದ್ದಾಪುರ, sys ಬಳ್ಳಾರಿ ಜಿಲ್ಲಾಅಧ್ಯಕ್ಷರಾದ ನವಾಜ್ ಹಾಜಿ, ಉದ್ಯಮಿ ಹಾಜಿ ಮುಹಮ್ಮದ್ ಕಾಕ ಗಂಗಾವತಿ, sys ಕೊಪ್ಪಳ ಜಿಲ್ಲಾ ಅಧ್ಯಕ್ಷ ನಝೀರ್ ಅಹ್ಮದ್ ಸಾಬ್, ಎಸ್ಸೆಸ್ಸೆಫ್ ಹಾವೇರಿ ಜಿಲ್ಲಾಧ್ಯಕ್ಷ ಯಾಸೀನ್ ಸಖಾಫಿ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಜುನೈದ್ ಸಖಾಫಿ, ಎಸ್ಎಸ್ಎಫ್ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಮುಫ್ತಿ ರೋಶನ್ ಝಮೀರ್ ಬರಕಾತಿ, ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಸಖಾಫಿ ಕುಡತಿನಿ, ಫಾರೂಖ್ ಹಿಮಮಿ, ಬದ್ರುದ್ದೀನ್ ಸಖಾಫಿ ಲಕ್ಷ್ಮೇಶ್ವರ ಮುಂತಾದ ಪ್ರಮುಖರು ಭಾಗವಹಿಸಿದರು.

error: Content is protected !! Not allowed copy content from janadhvani.com