ಕುವೈಟ್ ಸಿಟಿ: ಪ್ರಸ್ತುತ ವರ್ಷ ದೇಶದಲ್ಲಿ ಸಾರ್ವಜನಿಕ ಕ್ಷಮಾಪಣೆ ಇಲ್ಲ ಎಂದು ಕುವೈತ್ ಗೃಹ ಸಚಿವಾಲಯ ತಿಳಿಸಿದೆ. ಬದಲಾಗಿ, ದೇಶದಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಸೆರೆಹಿಡಿಯಲು ಕಠಿಣ ತಪಾಸಣೆಗೆ ಸರಕಾರ ಮುಂದಾಗಿದೆ.
ಅಂದಾಜಿನ ಪ್ರಕಾರ, ಡಿಸೆಂಬರ್ 2018 ರವರೆಗೆ ದೇಶದಲ್ಲಿ 1.10 ಲಕ್ಷ ಕಾನೂನು ಉಲ್ಲಂಘಕರು ನೆಲೆಸಿದ್ದಾರೆ. ಮುಂಬರುವ ದಿನಗಳಲ್ಲಿ ಇಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಬಂಧಿಸಿದ ಇಲಾಖಾ ಅಧಿಕಾರಿ ಮೇಜರ್ ಜನರಲ್ ತಲಾಲ್ ಮರಾಫಿ ತಿಳಿಸಿದ್ದಾರೆ.
ಅನಧಿಕೃತ ನಿವಾಸಿಗಳಿಗಾಗಿ ಕಳೆದ ವರ್ಷದಲ್ಲಿ ಸಾರ್ವಜನಿಕ ಕ್ಷಮಾಪಣೆ ಜಾರಿಮಾಡಿದ್ದು, ದೇಶವನ್ನು ತೊರೆಯಲು ಉದಾರ ವಿನಾಯಿತಿ ನೀಡಲಾಗಿತ್ತು. ಆದರೆ ಆ ಪ್ರಯೋಜನವನ್ನು ಉಪಯೋಗಿಸದೆ ಅಕ್ರಮವಾಗಿ ಉಳಿದಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಕಳೆದ ವರ್ಷ ಒಂದು ತಿಂಗಳ ಕಾಲ ಘೋಷಿಸಲಾದ ಸಾರ್ವಜನಿಕ ಕ್ಷಮಾಪಣೆಯನ್ನು ಮತ್ತೆ ವಿಸ್ತರಿಸಲಾಗಿತ್ತು. ಆದರೆ, ಗೃಹ ಸಚಿವಾಲಯವು ನಿರೀಕ್ಷಿತ ಫಲಿತಾಂಶ ಲಭಿಸಲಿಲ್ಲ ಎಂದು ಅಂದಾಜಿಸಿದೆ.