janadhvani

Kannada Online News Paper

ಖತರ್ ನಲ್ಲಿ ಅಲ್ ಖಾದಿಸ ರಹಮ್ ಕಾನ್ಫರೆನ್ಸ್

ದೊಹಾ: ಅಲ್ ಖಾದಿಸ ಕಾವಳಕಟ್ಟೆ ಇದರ ಖತರ್ ರಾಷ್ಟ್ರೀಯ ಸಮಿತಿ ವತಿಯಿಂದ ಶೈಖ್ ರಿಫಾಯೀ ಸ್ಮರಣಾರ್ಥ ರಹಮ್ ಕಾನ್ಫರೆನ್ಸ್ ಜನವರಿ 18 ಶುಕ್ರವಾರ ಮಧ್ಯಾಹ್ನ ಬಿನ್ ಒಮ್ರಾನ್ ಗಾರ್ಡನ್ ವಿಲ್ಲೇಜ್ ಹೋಟೆಲ್ ನಲ್ಲಿ ನಡೆಯಲಿದೆ.

ಅಲ್ ಖಾದಿಸ ಖತರ್ ಸಮಿತಿ ಅಧ್ಯಕ್ಷ ಕಬೀರಾಕ ದೇರಳಕಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ.
ಅಲ್ ಖಾದಿಸ ಶಿಲ್ಪಿ ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಹಝ್ರತ್ ಹಾಗೂ ಅಲ್ ಖಾದಿಸ CIS ಪ್ರಾಂಶುಪಾಲರಾದ ಹಾಫಿಲ್ ಸುಫ್ಯಾನ್ ಸಖಾಫಿ ಮುಖ್ಯಭಾಷಣ ಮಾಡುವರು.
KCF ಖತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುರ್ರಹೀಂ ಸಅದಿ, ಹಾಫಿಲ್ ಉಮರುಲ್ ಫಾರೂಖ್ ಸಖಾಫಿ, ಇಸ್ಹಾಖ್ ನಿಝಾಮಿ, ಹಾಗೂ ಇನ್ನಿತರ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ.