janadhvani

Kannada Online News Paper

ಸೌದಿ: ಇಖಾಮ ನವೀಕರಣ ವಿಳಂಬವಾದಲ್ಲಿ ಗಡೀಪಾರು

ಜಿದ್ದಾ: ಇಖಾಮ ನವೀಕರಿಸದವರೊಂದಿಗೆ ಯಾವುದೇ ರಾಜಿಯಿಲ್ಲ ಎಂದು ಪಾಸ್‌ಪೋರ್ಟ್ ಅಧಿಕಾರಿ ಎಚ್ಚರಿಸಿದ್ದಾರೆ.
ಮೂರನೆಯ ಬಾರಿಗೆ ನವೀಕರಿಸದಿದ್ದಲ್ಲಿ ದಂಡದೊಂದಿಗೆ ಗಡೀಪಾರು ಮಾಡಲಾಗುವುದು ಎಂದು ರಿಯಾದ್ ಪಾಸ್‌ಪೋರ್ಟ್‌ ಇಂಟೆಲಿಜೆನ್ಸ್ ಜನರಲ್ ಮಹಮ್ಮದ್ ಬಿನ್ ನಾಯಿಫ್ ಅಲ್‌ಹಿಬಾಜ್ ಹೇಳಿದರು.

ಹೊಸ ಇಖಾಮ ನೀಡುವುದು ಮತ್ತು ಅದರ ನವೀಕರಣ ವಿಳಂಬಗೊಳಿಸುವುದನ್ನು ಸೌದಿ ವಾಸ ಮತ್ತು ಉದ್ಯೋಗ ಕಾನೂನು ಅನುಮತಿಸುವುದಿಲ್ಲ.
ನಿಗದಿತ ಸಮಯದೊಳಗೆ ಇಖಾಮವನ್ನು ಪಡೆಯಿರಿ,ನಿಯಮಿತವಾಗಿ ನವೀಕರಿಸಿ, ಇಲ್ಲದಿದ್ದರೆ ದಂಡ ಸಹಿತ ಎಲ್ಲಾ ವಿಧ ಕ್ರಮಗಳನ್ನು ಎದುರಿಸಬೇಕಾದೀತು ಎಂದವರು ಹೇಳಿದರು.

ವ್ಯವಸ್ಥೆಗಳು ತುಂಬಾ ಸ್ಪಷ್ಟವಾಗಿವೆ.ಎಲ್ಲವನ್ನೂ ಪಾಸ್ಪೋರ್ಟ್ ಡೈರೆಕ್ಟರೇಟ್ ವೆಬ್ಸೈಟ್ನಲ್ಲಿ ದಾಖಲಿಸಲಾಗಿದೆ. ಇಖಾಮ ನವೀಕರಣದಲ್ಲಿ ವಿಫಲರಾದವರು ನೀಡುವ ಸಮಜಾಯಿಶಿಕೆಯನ್ನು ಅಂಗೀಕರಿಸಲಾಗದು.

ಕಾನೂನು ಉಲ್ಲಂಘನೆ ಪುನರಾವರ್ತನೆಯಾದರೆ ದಂಡವನ್ನು ದ್ವಿಗುಣಗೊಳಿಸಲಾಗುತ್ತದೆ. ಮೊದಲ ಬಾರಿಗೆ 500 ರಿಯಾಲ್ ದಂಡ ಆದರೆ, ಎರಡನೇ ಬಾರಿಗೆ 1000 ರಿಯಾಲ್ ಪಾವತಿಸಬೇಕಾಗುತ್ತದೆ. ಮೂರನೇ ಬಾರಿಗೆ, ವಿದೇಶಿಯರನ್ನು ತಾಯ್ನಾಡಿಗೆ ಗಡೀಪಾರು ಮಾಡಲಾಗುವುದು.

ಇಖಾಮ ನೀಡುವುದು ಮತ್ತು ನವೀಕರಣದ ವಿಳಂಬವನ್ನು ತಪ್ಪಿಸಲು ಉದ್ಯೋಗದಾತರು ಆಬ್ಶೀರ್, ಮುಕೀಂ ಮತ್ತು ‘ಅಬ್ಶಿಲ್ ಅಮಾಲ್’ ಮುಂತಾದ ವ್ಯವಸ್ಥೆಗಳನ್ನು ಪರಿಶೀಲಿಸಬೇಕು.
ಕಾಲಾವಧಿ ಮುಗಿದ ಇಖಾಮಾದೊಂದಿಗೆ ವಿದೇಶೀಯರು ಕೆಲಸ ಮಾಡುವುದು ಅಥವಾ ಯಾತ್ರೆ ಮಾಡುವುದೋ ಸಾಧ್ಯವಿಲ್ಲ ಎಂದು ಪಾಸ್‌ಪೋರ್ಟ್ ಅಧಿಕಾರಿ ಹೇಳಿದ್ದಾರೆ.

error: Content is protected !! Not allowed copy content from janadhvani.com