janadhvani

Kannada Online News Paper

ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್- ಮದ್ಯ ವಿರುದ್ಧ ಜನ ಜಾಗೃತಿ ಅಭಿಯಾನ

ಬಂಟ್ವಾಳ,ಡಿ.31: ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ವತಿಯಿಂದ ಬಿ.ಸಿ ರೋಡ್ ಮಿನಿ ವಿಧಾನಸೌಧದ ಎದುರು ಮದ್ಯ ಹಾಗೂ ಮಾದಕ ಪದಾರ್ಥಗಳ ವಿರುದ್ಧ ಜನ ಜಾಗೃತಿ ಅಭಿಯಾನ ನಡೆಯಿತು.

ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ಅಕ್ಬರ್ ಅಲಿ ಮದನಿ ಅಲಂಪಾಡಿ ಅವರ ಅಧ್ಯಕ್ಷತೆಯಲ್ಲಿ,SSF ದ.ಕ ಜಿಲ್ಲಾ ಕಾರ್ಯದರ್ಶಿ ಶರೀಫ್ ನಂದಾವರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

SSF ರಾಜ್ಯ ಕಾರ್ಯದರ್ಶಿ ಸುಫ್ಯಾನ್ ಸಖಾಫಿ ಸಂದೇಶ ಭಾಷಣ ಮಾಡಿದರು.

ಮಜೀದ್ ಸಖಾಫಿ ದುಆಃ ನೆರವೇರಿಸಿದರು. ಇರ್ಷಾದ್ ಗೂಡಿನಬಳಿ ಸ್ವಾಗತಿಸಿದರು.SSF ಜಿಲ್ಲಾ ಸದಸ್ಯರಾದ ರಶೀದ್ ಹಾಜಿ ಪ್ರಸ್ತಾವಿಕ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಇಬ್ರಾಹಿಂ ಸಖಾಫಿ ಸೆರ್ಕಳ, ಹಾರೀಸ್ ಪೆರಿಯಾಪಾದೆ , ಮುಹಮ್ಮದ್ ಅಲಿ ಮದನಿ ಸೆರ್ಕಳ ಹಾಗೂ ಇನ್ನಿತರ ಕಾರ್ಯಕರ್ತರು, ನಾಯಕರು, ಸಾಮಾಜಿಕ ಮುಖಂಡರು ಭಾಗವಹಿಸಿದ್ದರು.

ವರದಿ: ಮಜಿದ್ ಕದ್ಕಾರ್ ಅದ್ಯಕ್ಷರು ssf ಕಲ್ಲಡ್ಕ ಸೆಕ್ಟರ್