janadhvani

Kannada Online News Paper

ಟಿ.ವಿ ನಿರೂಪ‌ಕ‌ನ‌ ಪ್ರ‌ವಾದಿ ನಿಂದ‌ನೆ : ಕೆ.ಸಿ.ಎಫ್ ಸೌದಿ ಅರೇಬಿಯಾ ಖಂಡ‌ನೆ

ಪ್ರ‌ವಾದಿ ಮುಹ‌ಮ್ಮ‌ದ್ (ಸ‌.ಅ) ರ ಮಾದ‌ರೀ ಯೋಗ್ಯ‌ ಜೀವ‌ನ‌ವ‌ನ್ನು, ಕೌಟುಂಬಿಕ‌ ಪೂರ್ವಾಪ‌ರ‌ಗ‌ಳ‌ನ್ನು ಸ‌ರಿಯಾದ‌ ರೀತಿಯ‌ಲ್ಲಿ ಅರ್ಥ‌ಮಾಡಿಕೊಳ್ಳ‌ದೆ, ಟಿ.ವಿ ಚಾನ‌ಲ್ ನಿರೂಪ‌ಕ‌ರೊಬ್ಬ‌ರು ಅವ‌ಹೇಳ‌ನ‌ಕಾರಿ ಮಾತುಗ‌ಳ‌ನ್ನಾಡಿರುವುದ‌ನ್ನು ಕರ್ನಾಟ‌ಕ‌ ಕ‌ಲ್ಚ‌ರ‌ಲ್ ಫೌಂಡೇಶ‌ನ್ (ಕೆ.ಸಿ.ಎಫ್) ಸೌದಿ ಅರೇಬಿಯಾ ತೀವ್ರ‌ವಾಗಿ ಖಂಡಿಸುತ್ತ‌ದೆ.

ಟಿ.ವಿ ನಿರೂಪ‌ಕ‌ರೊಬ್ಬ‌ರು ಒಂದು ಧ‌ರ್ಮ‌ವ‌ನ್ನು ವಿಶ್ಲೇಸಿಸುವ‌ ನೆಪ‌ದ‌ಲ್ಲಿ ಇನ್ನೊಂದು ಧ‌ರ್ಮ‌ವ‌ನ್ನು ಅನಾವ‌ಶ್ಯ‌ಕ‌ವಾಗಿ ಎಳೆದು ತಂದು ಧಾರ್ಮಿಕ‌‌ ಭಾವೈಕ್ಯತೆ ಯ‌ನ್ನು ಕ‌ದ‌ಡುವ‌ ಕೆಲ‌ಸ‌ಕ್ಕೆ ಕೈ ಹಾಕಿರುವುದು ಭ‌ವ್ಯ‌ ಭಾರ‌ತ‌ದ‌ ಭಾವೈಕ್ಯತೆಗೆ ದ‌ಕ್ಕೆ ತಂದಿದೆ. ಇದ‌ರಿಂದ‌ ಮುಸ್ಲಿಮ್ ಸ‌ಮುದಾಯ‌ವು ಅತ್ಯಂತ‌ ಪ್ರೀತಿಸುವ‌‌ ಮ‌ಹೋನ್ನ‌ತ‌ ನಾಯ‌ಕ‌ರಾದ‌ ಪ್ರ‌ವಾದಿ ಮುಹ‌ಮ್ಮ‌ದ್ ಮುಸ್ತ‌ಫಾ ಸ್ವ‌ಲ್ಲ‌ಲ್ಲಾಹು ಅಲೈಹಿವ‌ ಸ‌ಲ್ಲ‌ಮ್ ರ‌ನ್ನು ನಿಂದಿಸಿದಂತಾಗಿದೆ. ಇದು ಭ‌ವ್ಯ‌ ಭಾರ‌ತ‌ದ‌ ಭಾವೈಕ್ಯತೆಗೆ ಅನ್ಯ‌ವಾದುದು ಮಾತ್ರ‌ವ‌ಲ್ಲ‌ ಇಡೀ ವಿಶ್ವ‌ದಾದ್ಯಂತ‌ ವಿರುವ‌ ಮುಸ್ಲಿಮ್ ಸ‌ಮುದಾಯ‌ವು ಸ‌ಹಿಸ‌ಲು ಸಾಧ್ಯವಿಲ್ಲ‌.
ಭಾರ‌ತ‌ದ‌ ಪ್ರ‌ತೀಯೊಬ್ಬ‌ ಪ್ರ‌ಜೆ ಸ‌ಹಿತ‌ ಪ್ರ‌ತೀ
ಮಾಧ್ಯ‌ಮ‌ಗ‌ಳು ಸ‌ರ್ವ‌ ಧ‌ರ್ಮ‌ಗ‌ಳ‌ನ್ನು ಗೌರ‌ವಿಸಿ, ಸ್ನೇಹ‌, ಸೌಹಾರ್ಧ‌ತೆ, ಸಾಮ‌ರ‌ಸ್ಯ‌ವ‌ನ್ನು ಬೆಳೆಸಿಕೊಳ್ಳುವ‌ವ‌ರಾಗ‌ಬೇಕೆ ಹೊರ‌ತು, ಧ‌ರ್ಮ‌ಗ‌ಳ‌ನ್ನು ನಿಂದಿಸುವ‌ವ‌ರಾಗ‌ಬಾರ‌ದು.
ಧ‌ರ್ಮ‌ಗ‌ಳ‌ನ್ನು ನಿಂದಿಸುವುದ‌ನ್ನು ಇಸ್ಲಾಮ್ ಧ‌ರ್ಮ‌ ಸ‌ಹಿತ‌ ಯಾವುದೇ ಧ‌ರ್ಮ‌ಗ‌ಳು ಪ್ರೋತ್ಸಾಹಿಸಿಲ್ಲ‌.

ಮಾಧ್ಯ‌ಮ‌ಗ‌ಳು ಇಂತ‌ಹ ಅಘಾತ‌ಕಾರಿ ವಿಷ‌ಯ‌ಗ‌ಳ‌ನ್ನು ಸ‌ಮಾಜ‌ದ‌ಲ್ಲಿ ಹಂಚಿಕೊಳ್ಳುವ‌ವ‌ರ‌ ವಿರುದ್ಧ‌ ತೀವ್ರ‌ ಹೋರಾಟ‌ಕ್ಕೆ ಮುಂದಾಗುವ‌ ಮೂಲ‌ಕ‌ ಮಾಧ್ಯ‌ಮ‌ ಧ‌ರ್ಮ‌ ಸ‌ಹಿತ ಭಾವೈಕ್ಯತೆಯ‌ನ್ನು ಉಳಿಸುವ‌ ಪ್ರ‌ಯ‌ತ್ನ‌ ಮಾಡ‌ಬೇಕಾಗಿದೆ.

ಪೋಲೀಸ್ ಇಲಾಖೆ ಹಾಗೂ ಸ‌ರ್ಕಾರ‌ ಇಂತ‌ಹ‌ ಅಪಾಯ‌ಕಾರಿ ಹೇಳಿಕೆ ನೀಡಿದ‌ ಟಿ.ವಿ ಚಾನ‌ಲ್ ಮ‌ತ್ತು ನಿರೂಪ‌ಕ‌ನ‌ ವಿರುದ್ಧ‌ ಸೂಕ್ತ‌ ಕ್ರ‌ಮ‌ ಕೈಗೊಂಡು ನ್ಯಾಯ‌ವ‌ನ್ನು ಒದಗಿಸಿ ಕೊಡ‌ಬೇಕೆಂದು ಕೆ.ಸಿ.ಎಫ್ ಸೌದಿ ಅರೇಬಿಯಾ ರಾಷ್ಟ್ರಿಯ‌ ಸ‌ಮಿತಿ ಅಧ್ಯ‌ಕ್ಷ‌ ಡಿ.ಪಿ ಯೂಸುಫ್ ಸ‌ಖಾಫಿ ಬೈತಾರ್ ಪ‌ತ್ರಿಕಾ ಪ್ರ‌ಕ‌ಟ‌ಣೆಯ‌ಲ್ಲಿ ಆಗ್ರ‌ಹಿಸಿದ್ದಾರೆ.

error: Content is protected !! Not allowed copy content from janadhvani.com