ದುಬೈ: ಕೊಡಗು ಜಿಲ್ಲೆಯಲ್ಲಿ ನಿರಾಶ್ರಿತರ ಸಹಾಯಕ್ಕಾಗಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸಮಿತಿಯು ನಡೆಸಿತ್ತಿರುವ ಸಾಂತ್ವನ ಕಾರ್ಯಗಳು ಅತ್ಯಂತ ಶ್ಲಾಘನೀಯ ವಾಗಿದ್ದು, ಜಿಲ್ಲೆಯ ಅನಿವಾಸಿ ಬಾಂಧವರು ಇಂತಹ ಸತ್ಕರ್ಮದಲ್ಲಿ ಕೈ ಜೋಡಿಸಿ ಸಂಘಟನೆಗೆ ಇನ್ನಷ್ಟು ಬಲವನ್ನು ನೀಡಬೇಕಾದದ್ದು ಅನಿವಾರ್ಯವಾಗಿದೆ ಎಂದು ಕೊಡಗು ಜಿಲ್ಲಾ ಪಂಚಾಯತ್ ಸದಸ್ಯರಾದ ಲತೀಫ್ ಸುಂಟಿಕೊಪ್ಪ ಕರೆ ನೀಡಿದ್ದಾರೆ.
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (KSWA) ಯು.ಎ.ಇ ಸಮಿತಿಯ ವತಿಯಿಂದ ಇತ್ತೀಚಿಗೆ ನಡೆದ ಬೃಹತ್ ಹುಬ್ಬುರ್ರಸೂಲ್ ಸಮಾವೇಶ ಹಾಗು ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಭಾಷಣ ಮಾಡಿದ ಲತೀಫ್ ಸುಂಟಿಕೊಪ್ಪರವರು ಸಂಘಟನೆಯ ಸೇವೆಗಳು ಜಿಲ್ಲೆಗೆ ಅತ್ಯಾವಶ್ಯಕವಾಗಿದ್ದು ಸಾಂತ್ವನದ ಬೆಳಕು ಸದಾ ಕೊಡಗಿನಲ್ಲಿ ಪಸರಿಸಲು ತಮ್ಮಿಂದಾಗುವ ರೀತಿಯಲ್ಲಿ ಸಹಾಯ ಮಾಡಲು ಮನವಿ ಮಾಡಿದರು.
ಸ್ವಾಗತ ಸಮಿತಿ ಛೇರ್ಮನ್ ಅರಾಫತ್ ನಾಪೋಕ್ಲು ಇವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹಿರಿಯ ನಾಯಕರಾದ್ ಜಲೀಲ್ ನಿಝಾಮಿ ಎಮ್ಮೆಮಾಡು ಉದ್ಘಾಟನೆ ನೆರವೇರಿಸಿದರು. ಖ್ಯಾತ ವಾಗ್ಮಿ ಜಲೀಲ್ ಸಖಾಫಿ ಕಡಲುಂಡಿ ಹುಬ್ಬುರ್ರಸೂಲ್ ಭಾಷಣ ಮಾಡಿದರು. ಕೆ.ಸಿ.ಎಫ಼್ ಅಂತರಾಷ್ಟ್ರೀಯ ನಾಯಕ ಅಲಿ ಮುಸ್ಲಿಯಾರ್ ಬಹರೈನ್, ಕರ್ನಾಟಕ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ ಖಾದರ್ ಸಮಾರಂಭಕ್ಕೆ ಶುಭ ಹಾರೈಸಿದರು.
ಹಿರಿಯ ನಾಯಕರುಗಳಾದ ಉಸ್ಮಾನ್ ಹಾಜಿ ನಾಪೋಕ್ಲು, KSWA ಯುಎಇ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿ, ಹಮೀದ್ ನಾಪೋಕ್ಲು, ಅಹ್ಮದ್ ಚಾಮಿಯಾಲ್, ಮುಹಮ್ಮದ್ ಹಾಜಿ ಕೊಂಡಂಗೇರಿ, ಇಬ್ರಾಹಿಂ ಫೈಝಿ ಚಾಮಿಯಲ್ ಸೇರಿದಂತೆ ಸಾಂಘಿಕ, ಸಾಮಾಜಿಕ ರಂಗದ ಪ್ರಮುಖರು, ಯುಎಇ ವಿವಿಧ ಉದ್ಯಮಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಪಂಚಾಯತ್ ಸದಸ್ಯ ಲತೀಫ಼್ ಸುಂಟಿಕೊಪ್ಪ, ಬಹರೈನ್ ಅಂತರರಾಷ್ಟ್ರೀಯ ಖುರ್’ಆನ್ ಸ್ಪರ್ಧೆಯ ವಿಜೇತರಾದ ಹಾಫಿಝ್ ದರ್ವೀಷ್ ಅಲಿ ಬಹರೈನ್ ಇವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾಸಲಾಯಿತು.
ವಿಶ್ವ ವಿಖ್ಯಾತ ಮಅ’ದಿನ್ ಅಕಾಡೆಮಿ ಶಿಲ್ಪಿಯೂ, ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿಯೂ ಆದ ಬದರುಸ್ಸಾದಾತ್ ಅಸ್ಸಯ್ಯಿದ್ ಇಬ್ರಾಹೀಮುಲ್ ಖಲೀಲು ಬುಖಾರಿ ದುಆ ಆಶೀರ್ವಚನ ನೀಡಿದರು. ಸಮಾವೇಶದ ಅಂಗವಾಗಿ ಶಾಹುಲ್ ಹಮೀದ್ ಸಖಾಫಿ ನೇತೃತ್ವದಲ್ಲಿ ನಡೆದ ಪ್ರತಿಭೋತ್ಸವದಲ್ಲಿ ಕೊಡಗಿನ ಹಲವು ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಭಾಷಣ, ಹಾಡುಗಳು ಸಮಾರಂಭಕ್ಕೆ ಮೆರುಗನ್ನು ತಂದು ಕೊಟ್ಟಿತು, KSWA ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡ್ ಸ್ವಾಗಿತಿಸಿ ಕೊನೆಯಲ್ಲಿ ಮಶೂದ್ ಹಾಕತ್ತೂರು ವಂದನಾರ್ಪಣೆ ಮಾಡಿದರು.