janadhvani

Kannada Online News Paper

ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಮಹಾಸಭೆ-2018

ಕಿನ್ಯಾ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಇದರ 2018 ರ ಸಾಲಿನ ವಾರ್ಷಿಕ ಮಹಾಸಭೆಯು ಡಿ,23ರಂದು ರಾತ್ರಿ ಸುನ್ನೀ ಸೆಂಟರ್ ಬೆಳರಿಂಗೆ ಕಿನ್ಯದಲ್ಲಿ ಸೆಕ್ಟರ್ ಅಧ್ಯಕ್ಷರಾದ ಇರ್ಫಾನ್ ನೂರಾನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಗಲಿದ ಸುನ್ನೀ ಸಂಘ ಕುಟುಂಬದ ನಾಯಕರು ಹಾಗೂ ಕಾರ್ಯಕರ್ತರ ಪರಲೋಕ ವಿಜಯಕ್ಕಾಗಿ ಝಿಕ್ರ್ ಮಜ್ಲಿಸ್ ಹಾಗೂ ದುಆ ಕಾರ್ಯಕ್ರಮವನ್ನು ಸೈಯ್ಯದ್ ಶಿಹಾಬುಧ್ಧೀನ್ ಅಲ್ ಬುಖಾರಿ ಕಿನ್ಯ ಇವರು ನಡೆಸಿದರು.ಸಭೆಗೆ ಆಗಮಿಸಿದ ಡಿವಿಜನ್ ಚುನಾವಣಾಧಿಕಾರಿ ಇಲ್ಯಾಸ್ ಪೊಟ್ಟೋಳಿಕೆ ಇವರ ನೇತ್ರತ್ವದಲ್ಲಿ ನಡೆದ ಸಭೆಯನ್ನು ಸೈಯ್ಯದ್ ಆಬಿದ್ ತಂಙಳ್ ಮೀಂಪ್ರಿ ಅಧಿಕೃತವಾಗಿ ಉಧ್ಘಾಟಿಸಿದರು.

ಸಮಿತಿಯ ನೂತನ ಸಾರಥಿಗಳನ್ನು ಆಯ್ಕೆಮಾಡಲಾಯ್ತು.

ಅಧ್ಯಕ್ಷರಾಗಿ ಇರ್ಫಾನ್ ನೂರಾನಿ,ಉಪಾಧ್ಯಕ್ಷರಾಗಿ ಸೈಯ್ಯದ್ ಆಬಿದ್ ತಂಙಳ್,ಜಹ್ಫರ್ ಖುತುಬಿನಗರ.ಪ್ರಧಾನ ಕಾರ್ಯದರ್ಶಿ ಫಯಾಝ್ ಕಿನ್ಯ ಜೊತೆಕಾರ್ಯದರ್ಶಿ ಬಶೀರ್ ಕೂಡಾರ,ಫಯಾಝ್ ಉಕ್ಕುಡ.ಕೋಶಾಧಿಕಾರಿಯಾಗಿ ಅಯ್ಯೂಬ್ ಖುತುಬಿನಗರ,ಕ್ಯಾಂಪಸ್ ಕಾರ್ಯದರ್ಶಿಯಾಗಿ ಆಶಿಕ್ ಮೀಂಪ್ರಿ,ಹೈಸ್ಕೂಲ್ ಕನ್ವೀನರ್ ಸಾಧಿಕ್ ಕುರಿಯ,ಇಶಾರ ಕನ್ವೀನರ್ ನುಹ್ಮಾನ್ ಕೂಡಾರ,S.B.S ಕನ್ವೀನರ್ ಇಕ್ಬಾಲ್ ಖುತುಬಿನಗರ ಹಾಗೂ ಇತರ 14 ಮಂದಿ ಕಾರ್ಯಾಕಾರಿ ಸಮಿತಿ ಸದಸ್ಯರನ್ನು ಆರಿಸಲಾಯ್ತು.

ವಾರ್ಷಿಕ ವರದಿಯನ್ನು ಫಯಾಝ್ ಕಿನ್ಯ ಹಾಗೂ ಲೆಕ್ಕಪತ್ರವನ್ನು ಸೈಯ್ಯದ್ ತ್ವಾಹ ಮಂಡಿಸಿದರು. ಮೆಹಬೂಬ್ ಸಖಾಫಿ ಕಿನ್ಯ ಸಂಘಟನಾ ತರಗತಿ ನಡೆಸಿದರು.

ಉಸ್ಮಾನ್ ಝುಹ್ರಿ, MKM ಇಸ್ಮಾಯಿಲ್ ಪ್ರಾಸ್ತಾವಿಕ ಭಾಷಣ ಮಾಡಿದರು.

ಸಭೆಗೆ ಉಳ್ಳಾಲ ಡಿವಿಜನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ, ಶರೀಫ್ ಸಅದಿ ಕಿನ್ಯ,ಹಾರಿಸ್ ಸಖಾಫಿ,ಇಲ್ಯಾಸ್ ಮದನಿ ,ಇರ್ಫಾನ್ ಮುಸ್ಲಿಯಾರ್,ಅಶ್ರಫ್ ಮದೀನ KCF, ಮುಹಮ್ಮದ್ ಮುಸ್ಲಿಯಾರ್ ಉಕ್ಕುಡ, ಹನೀಫ್ ಕುರಿಯ, ಹನೀಫ್ ಸ್ಟೋರ್, ಅಝೀಝ್ ಸಾಗ್, ಸಲಾಂ ಬಾಕಿಮಾರ್, ಅಲ್ಲದೆ ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವ್ಯಾಪ್ತಿಯ ಶಾಖೆಗಳ ನಾಯಕರು ಹಾಗೂ ಕಾರ್ಯಕರ್ತರು ಬಾಗವಹಿಸಿದ್ದರು.

ಫಯಾಝ್ ಕಿನ್ಯಾ ಸ್ವಾಗತಿಸಿ ಕೊನೆಯಲ್ಲಿ ಧನ್ಯವಾದ ಸಲ್ಲಿಸಿದರು.

ವರದಿ: ಫಯಾಝ್ ಕಿನ್ಯ

error: Content is protected !! Not allowed copy content from janadhvani.com