janadhvani

Kannada Online News Paper

ಯುಎಇ: ಕೆಸಿಎಫ್ “ಯುನಿಕ್ ಲೋಗೋ ಕಂಟೆಸ್ಟ್-2019”-ಅಶ್ರಫ್ ಕುಕ್ಕಾಜೆಯವರ ಲೋಗೋ ಆಯ್ಕೆ

ಅಶ್ರಫ್ ಕುಕ್ಕಾಜೆ
ದುಬೈ: ಕೆ.ಸಿ.ಎಫ್ ಯು.ಎ.ಇ ನ್ಯಾಷನಲ್ ಸಮಿತಿಯಿಂದ ಆಯೋಜಿಸಿದ ಪ್ರತಿಭೋತ್ಸವ ಯುನಿಕ್ ಲೋಗೋ ಕಂಟೆಸ್ಟ್-2019 ಸ್ಪರ್ಧೆಯಲ್ಲಿ ಅಶ್ರಫ್ ಕುಕ್ಕಾಜೆ ವಿನ್ಯಾಸಗೊಳಿಸಿದ ಲೋಗೋವನ್ನು ರಾಷ್ಟ್ರೀಯ ಸಮಿತಿ ಆಯ್ಕೆ ಮಾಡಿ ಪ್ರತಿಭೋತ್ಸವ ಲೋಗೋವಾಗಿ ಬಳಸುವಂತೆ ಸೂಚಿಸಿದೆ.ರಾಜ್ಯದಿಂದ ವಿಶೇಷವಾಗಿ ಪರಿಣತಿ ಹೊಂದಿದ ವಿನ್ಯಾಸಗಾರರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಲೋಗೋ ವಿನ್ಯಾಸವನ್ನು ಕಳುಹಿಸಿಕೊಟ್ಟಿದ್ದರು. 50 ಕ್ಕೂ ಮಿಕ್ಕ ವಿನ್ಯಾಸವನ್ನು ಪರಿಶೀಲಿಸಿದ ಕೆ.ಸಿ.ಎಫ್ ರಾಷ್ಟ್ರೀಯ ನಾಯಕರು ಕೊನೆಗೆ ಅಶ್ರಫ್ ಕುಕ್ಕಾಜೆಯವರು ರಚಿಸಿದ ಲೋಗೋವನ್ನು ಅಧಿಕೃತವಾಗಿ ಆಯ್ಕೆ ಮಾಡಿದ್ದಾರೆ.
ಕೆ.ಸಿ.ಎಫ್ ರಾಷ್ಟ್ರೀಯ ನಾಯಕರು ಮತ್ತು ಪ್ರತಿಭೋತ್ಸವ ಸ್ವಾಗತ ಸಮಿತಿ ನಾಯಕರ ಸಹಭಾಗಿತ್ವದಲ್ಲಿ ಯುಎಇ ಎಕ್ಸ್ ಚೇಂಜ್ ಮಾಲಕ NMC ಸಮೂಹ ಸಂಸ್ಥೆಗಳ ಸಂಸ್ಥಾಪಕ ಪ್ರಖ್ಯಾತ ಉದ್ಯಮಿ ಸೃಜನಶೀಲ ವ್ಯಕ್ತಿತ್ವದಿಂದ ಜನ ಮನಸ್ಸು ಗೆದ್ದ ಕರಾವಳಿ ಕನ್ನಡಿಗರ ಹೆಮ್ಮೆಯ ಪುತ್ರ ಬಿ.ಆರ್ ಶೆಟ್ಟಿಯವರು ಅಧಿಕೃತವಾಗಿ ಬಿಡುಗಡೆಗೊಳಿಸಿದರು.ಪ್ರಸ್ತುತ ಲೋಗೋವಿನ ತಳ ಭಾಗ ಮರಳು ಗಾಡಿನಿಂದ ಆವೃತ್ತಗೊಂಡಿದ್ದು ಅನಿವಾಸಿ ಜೀವನದ ಆರಂಭವನ್ನು ತಿಳಿಸುತ್ತದೆ. ಮರಳುಗಾಡಿನ ದೇಶೀಯ ಆಹಾರ ಕರ್ಜೂರದ ಮರವೊಂದು “K” ಆಕಾರದಲ್ಲಿ ಭಾಗಿ ನಿಂತಿದ್ದು ಅರಬ್ ರಾಷ್ಟ್ರದ ಮರಳುಗಾಡಿನ ಪ್ರಶಾಂತ ವಾತಾವರಣದಲ್ಲಿ ಬೆಳೆದು ಬರುತ್ತಿರುವ ಕರ್ಜೂರದ ಮರದ ಹಾಗೆ ಅನಿವಾಸಿ ಜೀವನವು ಆರಂಭಗೊಳ್ಳುತ್ತದೆ. ಚಂದ್ರನ ಆಕಾರದಲ್ಲಿ “C” ಮೂಡಿ ಬಂದಿದ್ದು ಅನಿವಾಸಿ ಜೀವನದ ಬೆಳಕಾಗಿ ಕೆ.ಸಿ.ಎಫ್ ಕಾರ್ಯನಿರ್ವಹಿಸುತ್ತಿದೆ ಎಂದು ಸೂಚಿಸುತ್ತದೆ. ಗಿಡ ಮತ್ತು ಎಲೆಗಳ ರೂಪದಲ್ಲಿ “F” ಮೂಡಿ ಬಂದಿದ್ದು . ಇದರ ಮಧ್ಯೆ ಪೆನ್ಸಿಲ್ ಆಕಾರದಲ್ಲಿ ಒಂದು ಎಲೆಯು ಪ್ರತಿಭೆಗಳನ್ನು ಹೋಲುವ ರೀತಿಯಲ್ಲಿದೆ.ಇದರ ಮೇಲ್ತುದಿಯಲ್ಲಿ ಬಣ್ಣ ಬಣ್ಣದ ಬಿಂದುಗಳು ಸೌಂದರ್ಯವನ್ನು ನೀಡಿದ್ದು ಕೆ.ಸಿ.ಎಫ್ ಮೂಲಕ ವಿವಿಧ ರೀತಿಯ ಪ್ರಯೋಜನಗಳನ್ನು ಪಡೆದು ಸುಂದರವಾದ ಅನಿವಾಸಿ ಜೀವನವನ್ನು ಆಸ್ವಾದಿಸಬಹುದು ಎಂಬ ಸ್ಪಷ್ಟ ಸಂದೇಶವನ್ನು ಸಾರುತ್ತದೆ.ವಿನ್ಯಾಸ ಕಳುಹಿಸಿಕೊಟ್ಟು ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ವಿನ್ಯಾಸಗಾರರಿಗೂ ಯು.ಎ.ಇ ಕೆ.ಸಿ.ಎಫ್ ಅಭಾರಿಯಾಗಿದೆ.

error: Content is protected !! Not allowed copy content from janadhvani.com