ಕುವೈತ್: ಅನಿವಾಸಿ ಕನ್ನಡಿಗರು ತನ್ನ ಬಿಡುವಿಲ್ಲದ ದುಡಿಮೆಯ ನಡುವೆಯೂ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುನ್ನೆಡೆಯುವ ಕೆಸಿಎಫ್ ಕುವೈತ್ ವತಿಯಿಂದ ‘ಸಂದೇಶ ವಾಹಕರೇ ತಮ್ಮಡೆಗೆ’ ಎಂಬ ಘೋಷ ವಾಕ್ಯದೊಂದಿಗೆ “ಇಲೈಕ ಯಾ ರಸೂಲಲ್ಲಾﷺِ” ಬೃಹತ್ ಮೀಲಾದ್ ಕಾರ್ಯಕ್ರಮ ನಡೆಯ್ತು.
ನ. 30 ರಂದು ಮಗ್ರಿಬ್ ನಮಾಝ್ ಬಳಿಕ ಇಂಡಿಯನ್ ಸೆಂಟ್ರಲ್ ಸ್ಕೂಲ್ ಅಬ್ಬಾಸಿಯದಲ್ಲಿ ಮೌಲೂದ್ ಪಾರಾಯಣ ದೊಂದಿಗೆ ಬಹುಮಾನ್ಯ ಅಸ್ಸಯ್ಯದ್ ಹಬೀಬ್ ಕೋಯ ಅಲ್ ಬುಖಾರಿ ತಂಙಳ್ ಕುವೈತ್ ರವರ ದುವಾದೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ಸದಸ್ಯರಾದ ಬಹು: ಉಮರ್ ಝುಹ್ರಿ ಉಸ್ತಾದರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ಅರ್ಥ ಗರ್ಭಿತ ಬೋಧನೆ ಮತ್ತು ದುವಾ ನಡೆಯ್ತು.
ಕೇರಳ ಎಸ್ಎಸ್ಎಫ್ ರಾಜ್ಯಾಧ್ಯಕ್ಷರೂ, ಪ್ರಭಾಷಣ ಲೋಕದ ಕಣ್ಮಣಿ,ಯುವ ವಾಗ್ಮಿ ಆಶಿಖುರ್ರಸೂಲ್ ಮೌಲಾನ ಡಾ:ಫಾರೂಖ್ ನಈಮಿ ಕೊಲ್ಲಂ ಮುಖ್ಯ ಪ್ರಭಾಷಣ ನಡೆಸಿದರು.
ಕೆಸಿಎಫ್ ಕುವೈತ್ ಸೌತ್ ಝೋನ್ ಚೆಯರ್ಮ್ಯಾನ್ ಬಹುಮಾನ್ಯ ಶಾಹುಲ್ ಹಮೀದ್ ಉಸ್ತಾದರು ಕಿರಾಅತ್ ಪಠಿಸಿ,ಕೆಸಿಎಫ್ ಕಾರ್ಯಕರ್ತರ ಬುರ್ದಾ ತಂಡದಿಂದ ಬುರ್ದಾ ಅಲಾಪನೆ ನಡೆಯಿತು.
PKM ಸಖಾಫಿ ಇರಿಙಲ್ಲೂರು(ಕೇರಳ sys ಉಪಾಧ್ಯಕ್ಷರು)ICF ಮಾಣಿಯೂರು ಉಸ್ತಾದ್, ಕೆಸಿಎಫ್ ಕುವೈತ್ ರಾಷ್ಟ್ರೀಯ ಶಿಕ್ಷಣ ವಿಭಾಗ ಚೆಯರ್ಮ್ಯಾನ್ ಬಹು.ಉಮರುಲ್ ಫಾರೂಖ್ ಸಖಾಫಿ, ಕೆಸಿಎಫ್ ರಾಷ್ಟ್ರೀಯ ಶಿಕ್ಷಣ ಕನ್ವೀನರ್ ಬಾದುಷ ಸಖಾಫಿ, ಕೆಸಿಎಫ್ ಅಂತರರಾಷ್ಟ್ರೀಯ ಆಡಳಿತ ಹಾಗೂ ಸಾರ್ವಜನಿಕ ಕನ್ವೀನರ್ ಬಹುಮಾನ್ಯ ಹುಸೈನ್ ಎರ್ಮಾಡ್, ಸ್ವಾಗತ ಸಮಿತಿಯ ಚೆಯರ್ಮ್ಯಾನ್ ಜನಾಬ್ ಯಾಕೂಬ್ ಕಾರ್ಕಳ, ಬದರ್ ಅಲ್ ಸಮಾ ಮೆಡಿಕಲ್ ಇದರ ಬ್ರಾಂಚ್ ಮೆನೇಜರ್ ಅಬ್ದುಲ್ ರಝಾಕ್ ಹಾಗೂ ICF ಅಧ್ಯಕ್ಷರಾದ ಬಹುಮಾನ್ಯ ಅಬ್ದುಲ್ ಹಕೀಂ ದಾರಿಮಿ ಉಸ್ತಾದ್ ರವರು ಕಾರ್ಯಕ್ರಮಕ್ಕೆ ಶುಭಕೋರಿ ಮಾತನಾಡಿದರು.
ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಹೊರತಂದ ಸುವನೀರ್ ಹಾಗೂ 20I9 ರ ಕ್ಯಾಲೆಂಡರನ್ನು ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ದಿವ್ಯ ಹಸ್ತದಿಂದ ಬಿಡುಗಡೆ ಗೊಳಿಸಲಾಯಿತು.
ಕೂರತ್ ತಂಙಳ್ ಮತ್ತು ಡಾ|ಫಾರೂಖ್ ನಈಮಿ ಉಸ್ತಾದರವರನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿಯ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕೆಸಿಎಫ್ ದಫ್ ಟೀಂ ವತಿಯಿಂದ ನಡೆದ ದಫ್ ಪ್ರದರ್ಶನ ಸಭಿಕರನ್ನು ರೋಮಾಂಚನಗೊಳಿಸಿತು.
ಬಹು: ಬಾದುಷ ಸಖಾಫಿ ಹಾಗೂ ಬಹು: ಹುಸೈನ್ ಎರ್ಮಾಡ್ ಕಾರ್ಯಕ್ರಮವನ್ನು ನಿರೂಪಿಸಿದರು.ಕೆಸಿಎಫ್ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಇಬ್ರಾಹಿಂ ವೇಣೂರು ಸ್ವಾಗತಿಸಿ, ಕೆಸಿಎಫ್ ರಾಷ್ಟ್ರೀಯ ಸಂಘಟನಾ ಚೆಯರ್ಮ್ಯಾನ್ ಝಕ್ರಿಯಾ ಆನೇಕಲ್ ಧನ್ಯವಾದಗೈದರು.