ವಿಟ್ಲ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್-ಎಸ್ಎಸ್ಎಫ್ ವಿಟ್ಲ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 13-12-2018 ಗುರುವಾರ ಮೇಗಿನಪೇಟೆ ನ್ಯೂಬೀ ಸ್ಕೂಲ್ ನಲ್ಲಿ ಸೆಕ್ಟರ್ ಸೆಕ್ಟರ್ ಅಧ್ಯಕ್ಷರಾದ ಅಬೂಬಕರ್ ಹಿಮಮಿ ಅಸ್ಸಖಾಫಿರವರ ಅಧ್ಯಕ್ಷತೆಯಲ್ಲಿ ನಡೆಯಿತು.
SSF ವಿಟ್ಲ ಡಿವಿಶನ್ ಸಮಿತಿಯ ಉಪಾಧ್ಯಕ್ಷರಾದ ಮೂಸಾ ಕಲೀಂರವರು ಸಭೆಯನ್ನು ಉದ್ಘಾಟಿಸಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಸೈಫುದ್ದೀನ್ ಅಳಕೆಮಜಲು ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಅಬ್ದುಲ್ ಗಫೂರ್ ಕಂಬಳಬೆಟ್ಟು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ವಿಟ್ಲ ಡಿವಿಶನ್ ಕೋಶಾಧಿಕಾರಿ ಅಬ್ದುಲ್ ರಹ್ಮಾನ್ ಶರಫಿ ಸಂಘಟಣಾ ತರಗತಿ ನಡೆಸಿದರು. ಬಳಿಕ ವಿಟ್ಲ ಡಿವಿಷನ್ ನಿಂದ ವೀಕ್ಷಕರಾಗಿ ಆಗಮಿಸಿದ ಅಬ್ದುಲ್ ಸಲೀಂ ಹಾಜಿ ಬೈರಿಕಟ್ಟೆ ಯವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರು : ಅಬೂ ಅಕ್ಮಲ್ ವಿಎಂ ನೌಫಲ್ ಮದನಿ ಮೇಗಿನಪೇಟೆ
ಪ್ರಧಾನ ಕಾರ್ಯದರ್ಶಿ : ಇಂಜಿನಿಯರ್ ಜಂಶಾದ್ ಕಂಬಳಬೆಟ್ಟು
ಕೋಶಾಧಿಕಾರಿ : ಹಾರಿಸ್ ಅಳಕೆಮಜಲು
ಕ್ಯಾಂಪಸ್ ಕಾರ್ಯದರ್ಶಿ : ಉನೈಸ್ ಅಳಕೆಮಜಲು
ಉಪಾಧ್ಯಯಕ್ಷರುಗಳು : ಅಬ್ದುಲ್ ಗಫೂರ್ ಕಂಬಳಬೆಟ್ಟು ಹಾಗೂ ಹೈದರ್ ಅಳಕೆಮಜಲು
ಕಾರ್ಯದರ್ಶಿಗಳು : ಶಹೀರ್ ಕೊಳಂಬೆ ಹಾಗೂ ಸಿರಾಜ್ ಕೋಲ್ಪೆ ಇವರನ್ನೊಳಗೊಂಡ 19 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.
ಮುಖ್ಯ ಅತಿಥಿಗಳಾಗಿ ವಿಟ್ಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝ್ಝಾಕ್ ಪೆಲ್ತಡ್ಕ, ಅಬ್ದುಲ್ ರಝ್ಝಾಕ್ ಬೈರಿಕಟ್ಟೆ, ಕಾರ್ಯದರ್ಶಿ ಅಷ್ಫಾಕ್ ಟಿಪ್ಪುನಗರ ಭಾಗವಹಿಸಿದರು.
ಸೈಫುದ್ದೀನ್ ಸ್ವಾಗತಿಸಿ ನೂತನ ಕಾರ್ಯದರ್ಶಿ ಜಂಶಾದ್ ವಂದಿಸಿದರು.