janadhvani

Kannada Online News Paper

ಕೆಸಿಎಫ್ ಯು.ಎ.ಇ ಪ್ರಸ್ತುತಪಡಿಸುತ್ತಿದೆ ‘ಕ್ರಿಯೇಟ್ ಯೂನಿಕ್ ಲೋಗೋ ಕಂಟೆಸ್ಟ್- 2019’

ನವ ವಿನ್ಯಾಸಗಾರರಿಗೊಂದು (ಡಿಸೈನರ್ಸ್) ಸುವರ್ಣವಕಾಶ!!!

ಕರ್ನಾಟಕ ಕಲ್ಚರಲ್ ಫೌಂಡೇಶನ್ ಯು.ಎ.ಇ ಪ್ರಸ್ತುತಪಡಿಸುತ್ತಿದೆ ಕ್ರಿಯೇಟ್ ಯೂನಿಕ್ ಲೋಗೋ ಕಂಟೆಸ್ಟ್- 2019

ಕರ್ನಾಟಕ ಕಲ್ಚರಲ್ ಫೌಂಡೇಶನ್ ಯು.ಎ.ಇ ಇದರ ರಾಷ್ಟ್ರೀಯ ಸಮೀತಿಯ ಅಧೀನದಲ್ಲಿ ಇದೆ ಜನವರಿ 11 2019 ರಂದು ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ ಕಾರ್ಯಕ್ರಮ ಅಜ್ಮಾನ್ ನಲ್ಲಿ ನಡೆಯಲಿದೆ. 135 ಸ್ಪರ್ಧೆಗಳೊಂದಿಗೆ ನಡೆಯುವ ಅತೀ ದೊಡ್ಡ ಸ್ಫರ್ಧೆ ಇದಾಗಿದ್ದು ಅನಿವಾಸಿ ಕನ್ನಡಿಗ ಕುಟುಂಬಗಳು, ಕೆ.ಸಿ.ಎಫ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಿಡ್ಸ್. ಜೂನಿಯರ್, ಸೀನಿಯರ್ ವಿಭಾಗಳಲ್ಲಿ ಸ್ಪರ್ಧೆಯು ಅತ್ಯಾಕರ್ಷಕವಾಗಿ ಮೂಡಿ ಬರಲಿದೆ.

ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ನಡೆಸುವ ಪ್ರತಿಭೋತ್ಸವಕ್ಕಾಗಿ ನಮ್ಮ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಚಟುವಟಿಕೆಗಳನ್ನು ಮತ್ತು ವಿನ್ಯಾಸ ಸಮುದಾಯವನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಪ್ರತಿಭೋತ್ಸವ ಲೋಗೋ ಡಿಸೈನ್ ಸ್ಪರ್ಧೆಯನ್ನು ಘೋಷಿಸುವ ಮೂಲಕ ನಾವು ವಿಶೇಷವಾಗಿ ಈ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಿದ್ದೇವೆ.

ಇಸ್ಲಾಮಿನ ಜೀವನ ಶೈಲಿ, ಪ್ರತಿಭೋತ್ಸವ ಮತ್ತು ಪ್ರವಾಸಿ ಜೀವನವನ್ನು ಒಳಗೊಂಡ ಅತ್ಯುತ್ತಮ ವಿನ್ಯಾಸವನ್ನು ಹೊಂದಿದ ಒಂದು ಲೋಗೋವನ್ನು ಮಾತ್ರ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಅಥವಾ ಈಮೈಲ್ ಮೂಲಕ ಸಂಪರ್ಕಿಸಿ.

ನೀವು ಮಾಡಿದ ವಿನ್ಯಾಸಗಳನ್ನು JPG ಅಥವಾ PNG ಫಾರ್ಮಾಟ್ ನಲ್ಲಿ ನಮಗೆ ಈಮೈಲ್ ಮಾಡಿ.

📞+971553303840
Email: pratibhotsava2019@gmail.com
Web: www.kcfworld.com

error: Content is protected !! Not allowed copy content from janadhvani.com