janadhvani

Kannada Online News Paper

ಸಹಬಾಳ್ವೆಯ ಬದುಕನ್ನು ಆರಂಭಿಸಲು ವಿಪತ್ತುಗಳು ಬರುವವರೆಗೆ ಕಾಯಬೇಡಿ: ಕಾಂತಪುರಂ ಎ.ಪಿ.ಉಸ್ತಾದ್

ಕಲ್ಲಿಕೋಟೆ: ಮರ್ಕಝ್‍ನ ನೇತೃತ್ವದಲ್ಲಿ ರಾಷ್ಟ್ರದ 21 ರಾಜ್ಯಗಳಲ್ಲಿ ನಡೆದ ಮೀಲಾದ್ ಆಚರಣೆಯ ಸಮಾಪ್ತಿಯಾಗಿ ಅಂತಾರಾಷ್ಟ್ರ ಮೀಲಾದ್ ಸಮ್ಮೇಳನವು ಕಾರಂದೂರು ಮರ್ಕಝ್‍ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು.ಕಿರ್ಗಿಸ್ಥಾನ್ ಮಾಜಿಪ್ರಧಾನಿ, ಅಂತಾರಾಷ್ಟ್ರೀಯ ವೈದ್ಯಕೀಯ ವಿಶ್ವ ವಿದ್ಯಾನಿಲಯದ ಸ್ಥಾಪಕ. ಕಿರ್ಗಿಸ್ಥಾನ್ ಪಾರ್ಲಿಮೆಂಟ್ ಡೆಪ್ಯುಟಿ ಚೆಯರ್‍ಮ್ಯಾನ್ ಡಾ. ಜುಮಾಲಿವ್ ಕುಬಾನಿ ಚೆಬೆಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ವಿವಿಧತೆಯಲ್ಲಿ ಏಕತೆ ಹಾಗೂ ಜಾತ್ಯಾತೀತದಲ್ಲಿ ಭಾರತ ಪ್ರಸಿಧ್ಧವಾಗಿದೆ. ವಿವಿಧ ಧರ್ಮ ವಿಶ್ವಾಸಿಗಳಿಗೆ ಸಾಹೋಧರ್ಯತೆಯಿಂದ ಬದುಕಲು ಸಾಧ್ಯವಾಗುವ ಸನ್ನಿವೇಶವು ಜಗತ್ತಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.

ಮುಖ್ಯಭಾಷಣ ನಡೆಸಿದ ಅಖಿಲ ಭಾರತ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಮಾತನಾಡುತ್ತಾ, ಮನಷ್ಯರೆಡೆಯಲ್ಲಿ ಐಕ್ಯತೆ ಉಂಟಾಗಲು ವಿಪತ್ತುಗಳು ಬರುವವರೆಗೆ ಕಾಯಬೇಡಿ ಎಂದು ಹೇಳಿ ಮಾನವೀಯ ಒಗ್ಗಟ್ಟಿಗೆ ಕರೆ ನೀಡಿದರು.ಸಂಜೆ 4.30 ಕ್ಕೆ ಸಯ್ಯಿದ್ ಅಲೀ ಬಾಫಕೀ ತಙಳ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯ್ಯಿದ್ ಝೈನುಲ್ ಆಬಿದೀನ್ ಬಾಫಕೀಹ್ ತಙಳ್ ಧ್ವಜಾರೋಹಣ ನಡೆಸಿದರು. ಸಮಸ್ತ ಅಧ್ಯಕ್ಷರಾದ ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್, ಮರ್ಕಝ್ ಶರೀಅತ್ ಸಿಟಿ ಡೀನ್ ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್, ಬದ್ರುಸ್ಸಾದಾತ್ ಸಯ್ಯಿದ್ ಖಲೀಲ್ ಅಲ್ ಬುಖಾರಿ ತಂಙಳ್, ಮರ್ಕಝ್ ಮ್ಯಾನೇಜರ್ ಸಿ. ಮುಹಮ್ಮದ್ ಫೈಝಿ, ಡಾ:ಎ.ಪಿ. ಅಬ್ದುಲ್ ಹಕೀಂ ಅಝ್‍ಹರಿ, ಮೀಲಾದ್ ಸಮ್ಮೇಳನದಲ್ಲಿ ಮಾತನಾಡಿದರು..

ವಿವಿಧ ರಾಷ್ಟ್ರಗಳಿಂದ ಆಗಮಿಸಿದ ಪ್ರಮುಖ ವಿದ್ವಾಂಸರು ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅರಬ್ ಜಗತ್ತಿನ ಪ್ರಮುಖ ಗಾಯಕರಾದ ಒಮಾನ್ ತಂಡದಿಂದ ಪ್ರಕೀರ್ತನಾ ಮಜ್ಲಿಸ್ ನಡೆಯಿತು. ಗುಜರಾತಿನ ಪ್ರಸಿಧ್ಧ ತಂಡದಿಂದ ವಿಶೇಷ ಕೀರ್ತನೆಗಳು ನಡೆಯಿತು.

ಈ ಕಾರ್ಯಕ್ರಮದಲ್ಲಿ ಮರ್ಕಝ್ ಆಶ್ರಯದಲ್ಲಿರುವ ಪ್ರಧಾನ ಅಕಾಡೆಮಿಕ್ ಕೇಂದ್ರ ಮರ್ಕಝ್ ಗಾರ್ಡನ್ ಕಾಲೇಜ್ ಓಫ್ ಇಸ್ಲಾಮಿಕ್ ಸೈನ್ಸ್ ವಿದ್ಯಾರ್ಥಿಗಳ ಪದವಿ ಪ್ರಧಾನ ಕಾರ್ಯಕ್ರಮ ನಡೆಯಿತು.

error: Content is protected !! Not allowed copy content from janadhvani.com