ದಮಾಮ್ ; ಕರ್ಣಾಟಕ ಸುನ್ನೀ ಸ್ಟೂಡೆಂಟ್ ಫೆಡರೇಶನ್, ಸುನ್ನೀ ಯುವಜನ ಸಂಘದ ನೇತೃತ್ವದಲ್ಲಿ ಡಿಸೆಂಬರ್ 3 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯುವ ಹುಬ್ಬುರ್ರಸೂಲ್ ಕಾನ್ಪೆರನ್ಸ್ ಮತ್ತು ಯು.ಎ ಇ ಕೆ.ಸಿ ಎಫ್ ನ ಪ್ರಾಯೋಜಕತ್ವದಲ್ಲಿ ನಡೆಯುವ ಕನೆಕ್ಟ್ -2018 ಕಾರ್ಯಕ್ರಮದ ಸೌದಿ ಮಟ್ಟದ ಪ್ರಚಾರಕ್ಕೆ ಚಾಲನೆ ಕೊಡಲಾಯಿತು. ಈ ಬಗ್ಗೆ ದಮ್ಮಾಮ್ ನಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಸೌದಿ ಕೆ,ಸಿ ಎಫ್ ನಾಯಕರುಗಳು ಪ್ರಚಾರ ಅಭಿಯಾನದ ವಿವಿಧ ಆಯಾಮಗಳ ಬಗ್ಗೆ ಚರ್ಚಿಸಿದರು. ಸಭೆಯ ಅಧ್ಯಕ್ಷತೆಯನ್ನು ಸೌದಿ ಕೆ.ಸಿ ಎಫ್ ಅಧ್ಯಕ್ಷರಾದ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ವಹಿಸಿದರು, ಮತ್ತು ಐ ಎನ್ ಸಿ ನಾಯಕ ಎನ್ ಎಸ್ ಅಬ್ದುಲ್ಲಾ ಉದ್ಘಾಟಿಸಿದರು. ಮತ್ತು ಐ ಎನ್ ಸಿ ಎಜುಕೇಶನಲ್ ವಿಂಗ್ ಕಾರ್ಯದರ್ಶಿ ಕಮರುದ್ದೀನ್ ಗೂಡಿನಬಳಿ. ಸೌದಿ ಕೆ.ಸಿ ಎಫ್ ಇದರ ಪೈನಾನ್ಸಿಯಲ್ ಕಂಟ್ರೋಲರ್ ಅಬೂಬಕರ್ ಹಾಜಿ ರೈಸ್ಕೋ, ಮತ್ತು ಪ್ರಧಾನ ಕಾರ್ಯದರ್ಶಿ ಉಮರ್ ಫಾರೂಕ್ ಕಾಟಿಪಳ್ಳ ಭಾಗವಹಿಸಿದ್ದರು.
ಕನೆಕ್ಟ್ -18 ” ಕಾರ್ಯಕ್ರಮದಲ್ಲಿ ಕೆ.ಸಿ ಎಫ್ ಯು. ಎ. ಇ ಪ್ರಾಯೋಜಕತ್ವದಲ್ಲಿ ಹನ್ನೊಂದು ಬಡ ಹೆಣ್ಣು ಮಕ್ಕಳ ವಿವಾಹವು ನಡೆಯಲಿದೆ. ಹಾಗೂ ಎಸ್ಸೆಸ್ಸೆಫ್ ನ ವತಿಯಿಂದ ಮೀಲಾದ್ ಜಾಥಾ ಮತ್ತು ಎಸ್ ವೈ ಎಸ್ ನ ವತಿಯಿಂದ ಹುಬ್ಬುರ್ರಸೂಲ್ ಕಾನ್ಪೆರನ್ಸ್ ನಡೆಯಲಿದೆ. ಇದರ ಪ್ರಚಾರ ಸಭೆಯನ್ನು ಸೌದಿಯಾದ್ಯಂತ ಮುಂದಿನ ದಿನಗಳಲ್ಲಿ ಸೌದಿ ಕೆ,ಸಿ ಎಫ್ ನಡೆಸಲಿದೆ.