janadhvani

Kannada Online News Paper

ಅಕ್ಷರ ನಗರ ಎಸ್ಸೆಸ್ಸೆಫ್ ಯುನಿಟ್ ಕಾನ್ಫೆರೆನ್ಸ್

ಪಾವೂರು ಅ.27 : ಎಸ್ ಎಸ್ ಎಫ್ ಕೊಣಾಜೆ ಸೆಕ್ಟರ್ ವ್ಯಾಪ್ತಿಯ ಮಲಾರ್ ಅಕ್ಷರ ನಗರ ಶಾಖೆಯಲ್ಲಿ ಯುನಿಟ್ ಕಾನ್ಫೆರೆನ್ಸ್ ಜರುಗಿತು.
ಆಧುನಿಕತೆಯ ಐಶಾರಾಮದಲ್ಲಿ ಪಿಶಾಚಿಯ ಕುಪ್ರೇರಣೆಗೆ ಬಲಿಯಾಗಿ ಜೀವನದ ಬಹುಮುಖ್ಯ ಕಾಲವನ್ನು ಕೆಡವಿ ಹಾಕುವ ಯುವ ತಲೆಮಾರನ್ನು ಧಾರ್ಮಿಕತೆಯ ಚೌಕಟ್ಟಿನೊಳಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿರಿ ಎಂದು ನೌಫಲ್ ಮುಸ್ಲಿಯಾರ್ ಅಲ್ ಮದೀನ ವಿದ್ಯಾರ್ಥಿ ಮುಖ್ಯ ಪ್ರಭಾಷಣದಲ್ಲಿ ಸೂಚಿಸಿದರು.

ಕಾರ್ಯಕ್ರಮವು ಆಸಿಫ್ ಮಲಾರ್ ಅಧ್ಯಕತೆಯಲ್ಲಿ ರಫೀಖ್ ಮಲಾರ್ ಉದ್ಘಾಟನೆ ಗೈದು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಫಲ್ ಫರೀದ್ ನಗರ ಪ್ರಾಸ್ತವಿಕ ಭಾಷಣ ಮಾಡಿದರು.

ಪ್ರಧಾನ ಕಾರ್ಯದರ್ಶಿ ಮುಬಾರಕ್ ಮಲಾರ್ ಸ್ವಾಗತಿಸಿ ಸಲಾಮ್ ಮಲಾರ್ ವಂದಿಸಿದರು.