janadhvani

Kannada Online News Paper

ಎಸ್ಸೆಸ್ಸೆಫ್ ಪದ್ಮುಂಜ ಯುನಿಟ್ ಕಾನ್ಫರೆನ್ಸ್ ಮತ್ತು ಫ್ಯಾಮಿಲಿ ಮೀಟ್

ಪದ್ಮುಂಜ. ಅಕ್ಟೋಬರ್, 24:ಎಸ್ಸೆಸ್ಸೆಫ್ ಪದ್ಮುಂಜ ಶಾಖೆಯ ಯುನಿಟ್ ಸಮ್ಮೇಳನ ಮತ್ತು ಫ್ಯಾಮಿಲಿ ಮೀಟ್ ಕಾರ್ಯಕ್ರಮವು ಅಕ್ಟೋಬರ್  24 ರಂದು ಖಲಂದರ್ ಷಾ ಜುಮಾ ಮಸೀದಿಯಲ್ಲಿ ನಡೆಯುತು.       ಎಸ್ಸೆಸ್ಸೆಫ್ ಪದ್ಮುಂಜ ಶಾಖಾ ಅಧ್ಯಕ್ಷ ಅಶ್ರಫ್ ಅಂತರ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಖಾ ಕಾರ್ಯದರ್ಶಿ ನಿಝಾಂ ರವರು ಅತಿಥಿಗಳನ್ನು ಸ್ವಾಗತಿಸಿದರು. ಎಸ್ ವೈ ಎಸ್ ರಾಜ್ಯ ಸದಸ್ಯರಾದ ಖಾಸಿಂ ಪದ್ಮುಂಜ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಖಲಂದರ್ ಷಾ ಜುಮಾ ಮಸೀದಿಯ ಖತೀಬ್ ಉಸ್ತಾದ್ ಮಸ್ಊದ್ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಖಲಂದರ್ ಪದ್ಮುಂಜ ಅವರು ಸಂಘಟನ ತರಗತಿ ನಡೆಸಿದರು.          ಜಿ.ಎಂ.ಮಹಮ್ಮದ್ ಕಾಮಿಲ್ ಸಖಾಫಿ ಮುಖ್ಯ ಪ್ರಭಾಷಣವನ್ನು ನಡೆಸಿದರು.

ವೇದಿಕೆಯಲ್ಲಿ ಖಲಂದರ್ ಷಾ ಜುಮಾ ಮಸೀದಿಯ ಮುಅದ್ಸಿನ್ ಉಸ್ತಾದ್ ಸಅದ್ ಹಿಮಮಿ, ಖಲಂದ್ ಷಾ ಜುಮಾ ಮಸೀದಿ ಕಾರ್ಯದರ್ಶಿ ಯೂಸುಫ್ ಅಂತರ, ಎಸ್ಸೆಸ್ಸೆಫ್ ಕುಪ್ಪೆಟ್ಟಿ ಸೆಕ್ಟರ್ ಅಧ್ಯಕ್ಷ ಫಾರೂಕ್ ಸಅದಿ, ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪದ್ಮುಂಜ,  ಎಸ್ ವೈಎಸ್ಎಸ್ ಪದ್ಮುಂಜ ಬ್ರಾಂಚ್ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಕಾರ್ಯದರ್ಶಿ ಸುಲೈಮಾನ್ ಪದ್ಮುಂಜ ಧನ್ಯ ಉಪಸ್ಥಿತಿ ಇದ್ದರು.