ರಿಯಾದ್ : ದಾರುಲ್ ಹಿಕ್ಮಾ ಎಜುಕೇಶನ್ ಸೆಂಟರ್ ಬೆಳ್ಳಾರೆ ಇದರ ರಿಯಾದ್ ಸಮಿತಿಯ ದ್ವಿತೀಯ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಇಲ್ಲಿನ ಎಕ್ಸಿಟ್ 8 ರಲ್ಲಿರುವ ನೆಕ್ಕಿಲ ಹೌಸ್ ನಲ್ಲಿ ನಡೆಯಿತು.
ದಾರುಲ್ ಹಿಕ್ಮಾ ರಿಯಾದ್ ಸಮಿತಿ ಉಪಾಧ್ಯಕ್ಷ ಅಬ್ದುಲ್ಲಾ ಹಾಜಿ ಅಂಚಿನಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷ ಹನೀಫ್ ಬೆಳ್ಳಾರೆ ಸಭೆಯನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಝಕೀರ್ ಹುಸೈನ್ ನೆಕ್ಕಿಲ ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಂಸ್ಥಗೆ ದಾರುಲ್ ಹಿಕ್ಮಾ ರಿಯಾದ್ ಸಮಿತಿ ವತಿಯಿಂದ ವಿವಿಧ ಸಂದರ್ಭಗಳಲ್ಲಿ ನೀಡಿದ ಕೊಡುಗೆ ಹಾಗೂ ದೇಣಿಗೆಗಳನ್ನು ಈ ವೇಳೆ ಸ್ಮರಿಸಲಾಯಿತು. ಮೊದಲ ಹಂತದಲ್ಲಿ ಸಂಸ್ಥೆಯ ಕಛೇರಿ ನಿರ್ವಹಣೆಗಾಗಿ ಕಂಪ್ಯೂಟರ್ ಒಂದನ್ನು ಕೊಡುಗೆಯಾಗಿ ನೀಡಲಾಗಿದ್ದು ಎರಡನೆಯದಾಗಿ ಶಾಲಾ ಬಸ್ ಖರೀದಿಸಿ ಕೊಡಲಾಗಿದೆ. ಅದೇ ರೀತಿ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿರುವ ಹಿಫ್ಲುಲ್ ಕುರಾನ್ ಕಟ್ಟಡದ ಕಾಮಾಗಾರಿಗಾಗಿ ಎಂಟು ಲೋಡ್ ಹೊಯ್ಗೆಯನ್ನು ದೇಣಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಅಭಿವೃದ್ಧಿಗೆ ಪೂರಕವಾಗುವ ನೆಲೆಯಲ್ಲಿ ಇನ್ನೂ ಹೆಚ್ಚಿನ ಪ್ರಯತ್ನ ಮಾಡಲಾಗುವುದು ಎಂದು ಮಹಾಸಭೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
2018 – 019 ಸಾಲಿಗೆ ನೂತನ ಸಮಿತಿ ರಚಿಸಲಾಗಿದ್ದು ಈ ಕಳಗಿನವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.
ಯೂಸುಫ್ ಚೆನ್ನಾರ್ (ಅಧ್ಯಕ್ಷರು)
ಅಬ್ದುಲ್ಲಾ ಹಾಜಿ ಅಂಚಿನಡ್ಕ , ಸತ್ತಾರ್ ಕರಿಂಬಿಲ ( ಉಪಾಧ್ಯಕ್ಷರು)
ಝಕೀರ್ ಹುಸೈನ್ ಪಂಜ (ಪ್ರಧಾನ ಕಾರ್ಯದರ್ಶಿ) ಉಬೈದ್ ಇಂದ್ರಾಜೆ , ಅಝೀಝ್ ನೆಕ್ಕಿಲ ( ಜತೆ ಕಾರ್ಯದರ್ಶಿಗಳು)
ಅಬ್ದುಲ್ ಅಝೀಝ್ ಮದನಿ ಕೊಕ್ಕಡ ( ಕೋಶಾಧಿಕಾರಿ) ದಾವೂದ್ ಸ’ಅದಿ ಉರುವಾಲು ಪದವು (ಸಂಚಾಲಕರು)
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಬ್ರಾಹಿಂ ಕಟ್ಟತ್ತಾರ್, ಅಶ್ರಫ್ ಮೊಗ್ರಾಲ್, ಆಸಿಫ್ ಮಂಜೇಶ್ವರ ಹಾಗೂ ಅಬ್ದುರ್ರಹ್ಮಾನ್ ಪಚ್ಚೆಂಬಳ ರನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಹನೀಫ್ ಬೆಳ್ಳಾರೆ ಆಯ್ಕೆಗೊಂಡರು.
ಆರಂಭದಲ್ಲಿ ಯೂಸುಫ್ ಚೆನ್ನಾರ್ ಸ್ವಾಗತಿಸಿದರು. ನೂತನ ಜತೆ ಕಾರ್ಯದರ್ಶಿ ಉಬೈದ್ ಇಂದ್ರಾಜೆ ಕೊನೆಯಲ್ಲಿ ಧನ್ಯವಾದ ಅರ್ಪಿಸಿದರು.