janadhvani

Kannada Online News Paper

SJU ವಿಟ್ಲ ಝೋನ್:ಉಲಮಾ ಮುಲಾಖಾತ್ ಯಶಸ್ವಿ ಸಮಾಪ್ತಿ

ವಿಟ್ಲ : ಧಾರ್ಮಿಕ ರಂಗದಲ್ಲಿ ಕಾರ್ಯಪ್ರವೃತ್ತರಾಗುವ ವಿದ್ವಾಂಸರ ಜವಾಬ್ದಾರಿಯು ಇನ್ನಷ್ಟು ಕಠಿಣವಾಗಿದ್ದು, ಹೆಚ್ಚೆಚ್ಚು ಕ್ರಿಯಾಶೀಲತೆಯಿಂದಲೇ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಶೈಖುನಾ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿಯವರು ಹೇಳಿದರು.

ಅವರು ವಿಟ್ಲ ಝೋನ್ ಎಸ್ ಜೆ ಯು ಸಮಿತಿ ಸಂಘಟಿಸಿದ ಉಲಮಾ ಮುಲಾಖಾತ್ ಸಮಾರಂಭವನ್ನು ಉದ್ಘಾಟಿಸುತ್ತಾ ಮಾತನಾಡುತ್ತಿದ್ದರು.
ಈಗಿನ ಕಾಲದ ಉಲಮಾಗಳು ತಮ್ಮ ಕರ್ತವ್ಯವನ್ನು ಕೇವಲ ಮಸೀದಿ-ದರ್ಸ್-ಮದ್ರಸಗಳಿಗೆ ಸೀಮಿತ ಗೊಳಿಸುವಂತಿಲ್ಲ. ಮೊಹಲ್ಲಾದ ಸರ್ವಾಂಗೀಣ ಅಭಿವೃದ್ಧಿಯನ್ನು ಕೈಗೆತ್ತಿಕೊಂಡು ಸುನ್ನೀ ಸಂಘಟನೆಗಳಲ್ಲಿ ಸಕ್ರಿಯರಾಗಿ ತಮ್ಮನ್ನು ಉಪಯೋಗಿಸಿ ಕೊಳ್ಳಬೇಕಾಗಿದೆ. ಅದರೊಂದಿಗೆ ವಿದ್ವಾಂಸರ ಗುರಿಯು ದೀನೀ ಸೇವೆ ಮಾತ್ರವಾಗಿರಬೇಕೆಂದೂ ಅವರು ಹೇಳಿದರು.ವಿಟ್ಲ ಝೋನ್ ಸಮಿತಿಯ ಅಧ್ಯಕ್ಷರಾದ ಅಲ್ಹಾಜ್ ಇಬ್ರಾಹೀಂ ಮದನಿ ಕಂಬಳಬೆಟ್ಟುರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಸುನ್ನೀ ಯುವಜನ ಸಂಘ ಕರ್ನಾಟಕ ರಾಜ್ಯ ನಿಕಟಪೂರ್ವ ಅಧ್ಯಕ್ಷರಾದ ಮೌಲಾನ ಕೆಪಿ ಹುಸೈನ್ ಸಅದಿ ಕೆಸಿ ರೋಡುರವರು ವಿದ್ವಾಂಸರ ಜವಾಬ್ದಾರಿಗಳ ಕುರಿತು ವಿಷಯ ಮಂಡಿಸಿ ತರಗತಿ ನಡೆಸಿದರು.
ಕಾರ್ಯಕ್ರಮದಲ್ಲಿ SJU ಜಿಲ್ಲಾ ಕೋಶಾಧಿಕಾರಿ ಅಲ್ಹಾಜ್ ಇಬ್ರಾಹೀಂ ಫೈಝಿ ಕನ್ಯಾನ, ಬಂಟ್ವಾಳ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಜಿಎಂ ಅಬೂಬಕರ್ ಸುನ್ನೀ ಫೈಝಿ, SMA ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ಎ ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಟಿಪ್ಪು ನಗರ ದಾರುನ್ನಜಾತ್ ಸಂಸ್ಥೆಯ ಅಧ್ಯಕ್ಷರಾದ ಶೈಖುನಾ ಅಬೂಬಕರ್ ಉಸ್ತಾದ್, SMA ವಿಟ್ಲ ಝೋನ್ ಪ್ರಧಾನ ಕಾರ್ಯದರ್ಶಿ ಕಾಸಿಂ ಸಖಾಫಿ, SYS ಜಿಲ್ಲಾ ನಾಯಕ ಕೆ.ಎಂ ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, SJU ಝೋನ್ ನಾಯಕರಾದ ಎಪಿ ಅಬೂಬಕರ್ ಸಖಾಫಿ ಟಿಪ್ಪುನಗರ, ವಿ.ಎಂ. ಅಬೂಬಕರ್ ಸಖಾಫಿ ಮಂಗಳಪದವು, ಸಿರಾಜುದ್ದೀನ್ ಮದನಿ ಕೋಡಪದವು, ಮುಹಮ್ಮದ್ ಶರೀಫ್ ಮದನಿ ಪೆರುವಾಯಿ, ಶರೀಫ್ ಸಅದಿ ಕರೋಪಾಡಿ, SYS ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ ಪಾಡಿ, SSF ಡಿವಿಷನ್ ಅಧ್ಯಕ್ಷರಾದ ಹಾಜೀ ಅಬ್ದುಲ್ ರಝ್ಝಾಕ್ ಸಖಾಫಿ ಕೆಲಿಂಜ, SJM ರೇಂಜ್ ಅಧ್ಯಕ್ಷರಾದ ಸುಲೈಮಾನ್ ಸಖಾಫಿ ಒಕ್ಕೆತ್ತೂರು, ವಿಟ್ಲ ರೀಜ್ಯನಲ್ ಸುನ್ನೀ ಮಾನೇಜ್ಮೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಮದನಿ, ಬಂಟ್ವಾಳ ತಾಲ್ಲೂಕು ಸಖಾಫೀ ಕೌನ್ಸಿಲ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಕಾಮಿಲ್ ಸಖಾಫಿ ಕಡಂಬು, ದಾರುನ್ನಜಾತ್ ವುಮೆನ್ಸ್ ಕಾಲೇಜು ಪ್ರಿನ್ಸಿಪಾಲ್ ಅಬ್ದುಲ್ ಖಾದರ್ ಫೈಝಿ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಹಾಫಿಳ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಉಕ್ಕುಡ ಸ್ವಾಗತಿಸಿ, ಕೊನೆಯಲ್ಲಿ ಕಾರ್ಯದರ್ಶಿ ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ ಧನ್ಯವಾದ ಸಲ್ಲಿಸಿದರು. ವಿಎಂ ಅಬ್ದುರ್ರಹ್ಮಾನ್ ಸಅದಿ ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.

error: Content is protected !! Not allowed copy content from janadhvani.com