ಮಂಗಳೂರು:ಎಸ್ಸೆಸ್ಸೆಫ್ ಮಂಗಳೂರು ಡಿವಿಷನ್ ವತಿಯಿಂದ ಡಿವಿಷನ್ ಮಟ್ಟದ ಚುನಾವಣಾ ಕಾರ್ಯಾಗಾರವು ಎಸ್ಸೆಸ್ಸೆಫ್ ಮಂಗಳೂರು ಡಿವಿಷನ್ ಅಧ್ಯಕ್ಷ ಜುನೈದ್ ಸ ಅದಿ ವಳವೂರು ರವರ ಆದ್ಯಕ್ಷತೆಯಲ್ಲಿ ಎಸ್.ಜೆ.ಯು ಕಛೇರಿ ಮಂಗಳೂರಿನಲ್ಲಿ ನಡೆಯಿತು.
ಎಸ್ಸೆಸ್ಸೆಪ್ ಮಂಗಳೂರು ಡಿವಿಷನ್ ಉಪಾಧ್ಯಕ್ಷ ಸಯ್ಯದ್ ಇಸ್ಹಾಕ್ ತಂಙಳ್ ಕಣ್ಣೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಚುನಾವಣಾ ಪ್ರಕ್ರಿಯೆಯ ಕುರಿತು ತರಗತಿ ನಡೆಸಿದರು.
ಕಾರ್ಯಕ್ರಮದಲ್ಲಿ ಡಿವಿಷನ್ ನಾಯಕರು ಮೊದಲಾದವರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸದಸ್ಯ ಜಬ್ಬಾರ್ ಕಣ್ಣೂರು ಸ್ವಾಗತಿಸಿ,ಕೊನೆಗೆವಂದಿಸಿದರು.