janadhvani

Kannada Online News Paper

ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಮಟ್ಟದ ಚುನಾವಣಾ ಕಾರ್ಯಾಗಾರ

ಕೋಣಾಜೆ:ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವತಿಯಿಂದ ಡಿವಿಷನ್ ಮಟ್ಟದ ಚುನಾವಣಾ ಕಾರ್ಯಾಗಾರವು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ರವರ ಆದ್ಯಕ್ಷತೆಯಲ್ಲಿ ಅಲ್- ಮದೀನಾ ಹಾಲ್ ತಿಬ್ಲೆಪದವುವಿನಲ್ಲಿ ನಡೆಯಿತು.

ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಉಪಾಧ್ಯಕ್ಷ ಫಾರೂಖ್ ಸಖಾಫಿ ಮದನಿ ನಗರ ದುಆ: ನೆರವೇರಿಸಿದರು.

ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಸದಸ್ಯ ಜಮಾಲುದ್ದೀನ್ ಸಖಾಫಿ ಮುದುಂಗಾರುಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸದಸ್ಯ ರಶೀದ್ ಹಾಜಿ ವಗ್ಗ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಚುನಾವಣಾ ಪ್ರಕ್ರಿಯೆಯ ಪೋಸ್ಟರ್ ಗಳನ್ನು ನಾಯಕರ ಸಾನಿಧ್ಯದಲ್ಲಿ ಬಿಡುಗಡೆ ಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ಜಿಲ್ಲಾ ಸದಸ್ಯ ಸಯ್ಯದ್ ಖುಬೈಬ್ ತಂಙಳ್,ಡಿವಿಷನ್ ಕೋಶಾಧಿಕಾರಿ ಶರೀಫ್ ಮುಡಿಪು, ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ, ಡಿವಿಷನ್ ನಾಯಕರಾದ ಮನ್ಸೂರು ಹಿಮಮಿ,ಜಾಫರ್ ಅಳೇಕಲ,ಶರೀಪ್ ಸ ಅದಿ ಸಂಬಾರತೋಟ,ಅಝೀಝ್ ಎಚ್.ಕಲ್,ನೌಫಲ್ ಫರೀದ್ ನಗರ ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಚುನಾವಣಾಧಿಕಾರಿ ತೌಸೀಫ್ ಸ ಅದಿ ಹರೇಕಳ ಸ್ವಾಗತಿಸಿದರು.ಡಿವಿಷನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ ವಂದಿಸಿದರು.