ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿ ಆಶ್ರಯದಲ್ಲಿ ಶಾಖಾ ನಾಯಕರ ಶಿಬಿರ *ಎನ್’ಲೇಝ್* ಸುಳ್ಯ ಸೆಕ್ಟರ್ ಸಮಿತಿ ಅಧ್ಯಕ್ಷರಾದ ಜುನೈದ್ ಸಖಾಫಿ ಜೀರ್ಮುಕ್ಕಿ ಅಧ್ಯಕ್ಷತೆಯಲ್ಲಿ ಸೆಪ್ಟಂಬರ್ 30ರಂದು ಏಣಾವರ ತಾಜುಲ್ ಉಲಮಾ ವೇದಿಕೆಯಲ್ಲಿ ಜರಗಿತು.
ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಳೀಯ ಇಮಾಮರಾದ ಶಾಫಿ ಮಿಸ್ಬಾಹಿ ದುಆ ನೆರವೇರಿಸಿದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ರಹ್ಮಾನ್ ಮೊಗರ್ಪಣೆ ಶುಭ ಹಾರೈಸಿದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿ ಕಾರ್ಯದರ್ಶಿ, ಕಾವಲ್ಕಟ್ಟೆ ಅಲ್ ಖಾದಿಸ ಪ್ರಿನ್ಸಿಪಾಲ್ ಮೌಲಾನಾ ಹಾಫಿಝ್ ಸುಫ್ಯಾನ್ ಸಖಾಫಿ ಸಂಘಟನಾ ತರಬೇತಿ ನೀಡಿದರು.
ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಉಸ್ತುವಾರಿ ಹಸೈನಾರ್ ನೆಕ್ಕಿಲ, ಎಸ್.ವೈ.ಎಸ್ ಸುಳ್ಯ ಬ್ರಾಂಚ್ ಕೋಶಾಧಿಕಾರಿ ಸಿದ್ದೀಕ್ ಕಟ್ಟೆಕಾರ್, ಎಸ್.ವೈ.ಎಸ್ ಏಣಾವರ ಬ್ರಾಂಚ್ ಅಧ್ಯಕ್ಷರಾದ ಇಬ್ರಾಹೀಂ ಹಾಜಿ ಏಣಾವರ, ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಉಪಾಧ್ಯಕ್ಷರಾದ ಅಬ್ದುಲ್ಲ ಝುಹ್ರಿ ಮೊಗರ್ಪಣೆ, ಎಸ್ಸೆಸ್ಸೆಫ್ ಏಣಾವರ ಶಾಖಾಧ್ಯಕ್ಷರಾದ ಸಿರಾಜ್ ಏಣಾವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸೆಕ್ಟರ್ ಅಧೀನದ ಹತ್ತು ಯುನಿಟ್’ಗಳ ಸೆಕ್ರಟೇರಿಯೇಟ್ ನಾಯಕರು ಪ್ರತಿನಿಧಿಗಳಾಗಿ ಭಾಗವಹಿಸಿದರು.
ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಪ್ರ.ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ಸ್ವಾಗತಿಸಿ, ಕಾರ್ಯದರ್ಶಿ ಶಫೀಖ್ ಕೊಯಂಗಿ ವಂದಿಸಿದರು.