ಕರ್ನಾಟಕದ ಮಣ್ಣಲ್ಲಿ ಹುಟ್ಟಿ, ಬೆಳೆದು ತನ್ನ ಯುವ ಪ್ರಾಯದಲ್ಲೇ ಪ್ರಭಾಷಣ ವೇದಿಕೆಗಳಲ್ಲಿ ತನ್ನ ಅತ್ಯುಜ್ವಲವಾದ ಪ್ರಭಾಷಣಗಳ ಮೂಲಕ ಮನೆ ಮಾತಾಗಿರುವ ಯುವ ಪಂಡಿತರಾಗಿದ್ದಾರೆ ನೌಫಲ್ ಸಖಾಫಿ ಕಳಸ.
ತಲೆ ತಲಾಂತರಗಳಿಂದ ಕೇರಳದ ಉಲಮಾಗಳೇ ಕರ್ನಾಟಕದ ವೇಧಿಕೆಗಳಲ್ಲಿ ತಮ್ಮ ಸಕ್ರಿಯ ಸಾನಿಧ್ಯವನ್ನು ತೋರಿಸುತ್ತಿರುವಾಗ ಆ ಚರಿತ್ರೆಯಲ್ಲಿ ಸ್ವಲ್ಪ ಬದಲಾವಣೆ ತಂದು ಇಂದು ಕೇರಳದ ಒಂದು ತುದಿಯಿಂದ ಮಗದೊಂದು ತುದಿಯವರೆಗೆ ನಿರಂತರ ವೇದಿಕೆಗಳಲ್ಲಿ ಸಾನಿಧ್ಯವನ್ನು ತೋರಿಸಿ ಅಚ್ಚರಿ ಮೂಡಿಸುತ್ತಿರುವ ಯುವ ಪ್ರಾಯದ ಪಂಡಿತ ಶಿರೋಮಣಿಯೇ ನೌಫಲ್ ಸಖಾಫಿ ಕಳಸ.
ಯುವಕರಲ್ಲಿ ಸಾಂಧರ್ಭಿಕವಾಗಿ ನಡೆಯುವ ವಿಚಾರಗಳ ಕುರಿತು ಜಾಗೃತಿಯನ್ನು ಮೂಡಿಸುತ್ತಾರೆ,ಯುವ ಮನಸ್ಸುಗಳಲ್ಲಿ ಮದೀನಾದ ಪ್ರೀತಿಯ ಅಲೆಯನ್ನು ತುಂಬುತ್ತಾರೆ, ಕೆಡುಕುಗಳಿಂದ ದೂರ ಸರಿಯುವಂತೆ ಮಾರ್ಗದರ್ಶನ ನೀಡುತ್ತಾರೆ,ಯುವ ಪ್ರಾಯದಲ್ಲೇ ಮೂಡಬಿದ್ರೆಯಲ್ಲಿ ದರ್ಸ್ ಸ್ಥಾಪಿಸಿ ದರ್ಸ್ ಶಿಕ್ಷಣದ ಬೆಳಕಾಗುತ್ತಾರೆ, ಆತ್ಮೀಯ ವೇಧಿಕೆಗಳ ಸಾನಿಧ್ಯವನ್ನು ವಹಿಸುತ್ತಾರೆ, ಪೊನ್ಮಲ ಉಸ್ತಾದರ ಪ್ರೀತಿಯ ಶಿಷ್ಯರಾಗುತ್ತಾರೆ ಇವೆಲ್ಲ ನಮ್ಮ ನೌಫಲ್ ಸಖಾಫಿ ಉಸ್ತಾದರ ಕೆಲವೊಂದು ಶ್ರೇಷ್ಠತೆಗಳು….
ಉಸ್ತಾದರನ್ನು ಒಮ್ಮೆ ಭೇಟಿಯಾದವರು ಅಚ್ಚುಮೆಚ್ಚಿನ ಮಾರ್ಗದರ್ಶರಾಗಿಯೂ,ಪ್ರೀತಿಯ ಉಸ್ತಾದರಾಗಿಯೂ ಆಯ್ಕೆಮಾಡುತ್ತಾರೆ,ಇದರಲ್ಲಿ ಕಣ್ಣೂರಿನಲ್ಲಿ ಅಕ್ರಮಿಗಳ ದಾಳಿಗೆ ನಮ್ಮಿಂದಗಲಿದ ಸುಹೈಬ್ ಕಣ್ಣೂರು ಸ್ಮರಣೀಯ ವ್ಯಕ್ತಿಯಾಗುತ್ತಾರೆ…
ಉಸ್ತಾದರಿಗೆ ಅಸಂಖ್ಯಾತ ಅಭಿಮಾನಿಗಳು,ಉಸ್ತಾದರು ಪುತ್ತೂರಿಗೆ ಮದೀನಾದ ಮಹಿಮೆಯನ್ನು,ಯೌವ್ವನದ ಮಹತ್ವವನ್ನೂ ,ಮಾಧಕ ವಸ್ತುಗಳ ಭಯಾನಕ ಜೀವನದ ಆಗು ಹೋಗುಗಳನ್ನು ತಮ್ಮ ಸಂಪಧ್ಭರಿತ ಇಲ್ಮ್ ನ ಸಾಗರವನ್ನು ನಮ್ಮೊಂದಿಗೆ ಹಂಚಿಕೊಳ್ಳಲು inshallah ಅಕ್ಟೋಬರ್ 24ರಂದು ಪುತ್ತೂರು ಟೌನ್ ಯುನಿಟ್ ಸಮ್ಮೇಳನದ ಮುಖ್ಯ ಪ್ರಭಾಷಣಗಾರರಾಗಿ ಪುತ್ತೂರಿಗೆ ಬರುವಾಗ ನಾವು ಭಾಗಿಯಾಗೋಣ….
ನಮ್ಮೆಲ್ಲ ಗೆಳೆಯರನ್ನು ಹಿರಿಯರನ್ನು, ಕಿರಿಯರನ್ನು ಭಾಗಿಯಾಗಿಸೋಣ…
ರಾಫಿ ನಗರ
rafinagara313@gmail.com