janadhvani

Kannada Online News Paper

ಭಟ್ಕಳದಲ್ಲಿ ಎಸ್ಸೆಸ್ಸೆಫ್ ಟೀಮ್ ಹಸನೈನ್ ಸಕ್ರೀಯ ಕಾರ್ಯಕರ್ತರ ಸಂಗಮ

ಭಟ್ಕಳ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಭವಿಷ್ಯದ ನಾಯಕರನ್ನು ಸೃಷ್ಟಿಸಲು ಸಕ್ರೀಯ ಕಾರ್ಯಕರ್ತರಿಗಾಗಿ ಟೀಮ್ ಹಸನೈನ್ ಸಕ್ರೀಯ ಕಾರ್ಯಕರ್ತರ ಸಂಗಮವು ಎಸ್ಸೆಸ್ಸೆಫ್ ಉತ್ತರ ಕನ್ನ್ಡಡ ಜಿಲ್ಲಾಧ್ಯಕ್ಷ ಅಸಯ್ಯದ್ ಅಲವಿ ತಂಙಳ್ ಕರ್ಕಿ ಹೊನ್ನಾವರ ರವರ ಅಧ್ಯಕ್ಷತೆಯಲ್ಲಿ ತಾಜುಸ್ಸುನ್ನ ಭಟ್ಕಳದಲ್ಲಿ ನಡೆಯಿತು.

ಎಸ್.ವೈ.ಎಸ್.ಉತ್ತರ ಕನ್ನಡ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಡಾ! ಯಹ್ಯಾ ಅಸ್ಕೇರಿ ಭಟ್ಕಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ ತರಗತಿಯನ್ನು ನಡೆಸಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸದಸ್ಯರಾದ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ನವಾಝ್ ಭಟ್ಕಳ್, ದ.ಕ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಎಚ್ ಝುಹ್ರಿ ಕೊಂಬಾಳಿ,ಉತ್ತರ ಕನ್ನಡ ಕ್ಯಾಂಪಸ್ ಕಾರ್ಯದರ್ಶಿ ಸಿನಾನ್ ಭಟ್ಕಳ್,ಮೌಲಾನಾ ಮಹಮ್ಮದ್ ಜಸ್ಮುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಉತ್ತರ ಕನ್ನಡ ನಾಯಕ ಉಸ್ಮಾನ್ ಮದನಿ ಸ್ವಾಗತಿಸಿ,ಕೊನೆಗೆ ವಂದಿಸಿದರು.