ದುಬೈ: ದುಬೈನ ವಾಣಿಜ್ಯ ವಲಯಗಳಲ್ಲಿ ನಿಲ್ಲಿಸಿದ ವಾಹನಗಳಿಂದ ದರೋಡೆ ಹೆಚ್ಚಾದ ಕಾರಣ, ವಾಹನ ಮಾಲೀಕರಿಗೆ ದುಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇಂಜಿನ್ ನಿಲ್ಲಿಸದೇ ವಾಹನವನ್ನು ಬಿಟ್ಟು ಕದಲದಿರುವಂತೆ ಟ್ವಿಟ್ಟರ್ ಪುಟದಲ್ಲಿ ಪೊಲೀಸ್ ಎಚ್ಚರಿಕೆಯ ಸಂದೇಶವನ್ನು ಪೋಸ್ಟ್ ಮಾಡಿದೆ. ಜಬೆಲ್ ಅಲಿ ಮತ್ತು ಅಲ್ ಖಿಸೈಸ್ ಕೈಗಾರಿಕಾ ಪ್ರದೇಶಗಳಲ್ಲಿ ನಿಲುಗಡೆ ಮಾಡಲಾದ ಕಾರುಗಳಿಂದ ಬ್ಯಾಟರಿಗಳನ್ನು ಕದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.
ಬಂಧನಕ್ಕೊಳಗಾದ ಆ ನಾಲ್ಕು ಮಂದಿಯೂ ಏಷ್ಯನ್ ವಂಶಜರಾಗಿದ್ದರು. ಬ್ಯಾಟರಿಗಳನ್ನು ಕದ್ದು ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದ ಕಳ್ಳರನ್ನು ಕುತೂಹಲಕಾರಿಯಾಗಿ ಬಂಧಿಸಲಾಗಿತ್ತು.
ಸೂಚನೆಗಳು
* ಸ್ವಲ್ಪ ಸಮಯದ ಮಟ್ಟಿಗಾದರೂ ಸರಿ, ಇಂಜಿನ್ ಚಾಲನೆಯಲ್ಲಿಟ್ಟು ವಾಹನ ಬಿಟ್ಟು ಕದಲಬೇಡಿ.
* ವಾಹನದ ಬಾಗಿಲನ್ನು ಲಾಕ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಇರುಳು ಪ್ರದೇಶಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಡಿ.
* ಒಂಟಿ ಸ್ಥಳಗಳಲ್ಲಿ ಮತ್ತು ಮರಳು ಪ್ರದೇಶಗಳಲ್ಲಿ ದೀರ್ಘ ಸಮಯ ಪಾರ್ಕ್ ಮಾಡುವುದು ಅಪಾಯಕಾರಿಯಾಗಿದೆ.
* ನಿಲುಗಡೆ ಮಾಡಿದ ಕಾರಿನ ಒಳಗೆ ದುಬಾರಿ ವಸ್ತುಗಳನ್ನು ಹೊರಗೆ ಕಾಣುವ ರೀತಿಯಲ್ಲಿ ಇಡಬೇಡಿ.
* ಉತ್ತಮ ಬೆಳಕಿರುವ ಸಿಸಿಟಿವಿ ಕ್ಯಾಮೆರಾಗಳ ಮೇಲ್ನೋಟವಿರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುವುದು ಅತ್ಯಂತ ಸುರಕ್ಷಿತ ಎಂದು ಪೊಲೀಸರ ಸೂಚನೆಯಲ್ಲಿ ತಿಳಿಸಲಾಗಿದೆ.