janadhvani

Kannada Online News Paper

ಪ್ರಳಯ ಪೀಡಿತ ಕೇರಳಕ್ಕೆ ಎಸ್ಸೆಸ್ಸಫ್ ನಿಂದ ಒಂದು ಲಕ್ಷ ನೋಟ್ ಬುಕ್ಸ್ ಹಸ್ತಾಂತರ.

ಬೆಂಗಳೂರು : ಭೀಕರ ಪ್ರಳಯದಿಂದ ತತ್ತರಿಸಿರುವ ಕೇರಳ ಜನತೆಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕರ್ನಾಟಕ ಎಸ್ಸೆಸ್ಸಫ್ ಸಂಗ್ರಹಿಸಿರುವ ಒಂದು ಲಕ್ಷ ನೋಟ್ ಬುಕ್ಸ್ ನ್ನು ಬೆಂಗಳೂರಿನ ಹಜ್ ಸಮಿತಿ ಕಟ್ಟಡದಲ್ಲಿರುವ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ (IEBI) ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಖಿಲ ಭಾರತ ಸುನ್ನೀ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಅದ್ಯಕ್ಶ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರವರಿಗೆ ಕರ್ನಾಟಕ ಎಸ್ಸೆಸ್ಸಫ್ ಅಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಇಹ್ಸಾನ್ ಚೇರ್ಮನ್ ಎನ್ ಕೆ ಎಂ ಶಾಫಿ ಸ ಅದಿ ಬೆಂಗಳೂರು, IAS ಆಫೀಸರ್ ಝಮೀರ್ ಪಾಶ, ಎಸ್ ಎಸ್ ಎ ಖಾದರ್ ಹಾಜಿ, ಮರ್ಕಝ್ ನಾಲೆಡ್ಜ್ ಸಿಟಿ ಸಿಇಒ ಅಬ್ದುಲ್ ಸಲಾಂ ಸಹಿತ ಹಲವು ಉಲಮಾ , ಉಮರಾ ನಾಯಕರು ಉಪಸ್ಥಿತರಿದ್ದರು.