janadhvani

Kannada Online News Paper

ಇಬ್ಬಾಗವಾದ ಪೊನ್ನಾನಿ ಸಮುದ್ರ – ಜನರಲ್ಲಿ ಆತಂಕ

ಮಲಪ್ಪುರಂ, ಸೆ.15:- ಭಾರೀ ಮಳೆ, ಪ್ರವಾಹ ಹಾಗೂ ಭೂ ಕುಸಿತಗಳಿಂದ ಹಲವಾರು ಸಾವು-ನೋವು, ಆಸ್ತಿ-ಪಾಸ್ತಿ ಹಾನಿಯಿಂದ ಕಂಗೆಟ್ಟಿರುವ ಕೇರಳದಲ್ಲಿ ವಿಸ್ಮಯಕಾರಿ ವಿದ್ಯಮಾನವೊಂದು ಜನರಲ್ಲಿ ಆತಂಕ ಮೂಡಿಸಿದೆ.  ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಾನಿ ತಾಲೂಕಿನ ಪೊನ್ನಾನಿ ಸಮುದ್ರವು ಎರಡು ಭಾಗಗಳಾಗಿದ್ದು, ಜನರು ಭಯಮಿಶ್ರಿತ ಕುತೂಹಲದಿಂದ ತಂಡೋಪತಂಡವಾಗಿ ವೀಕ್ಷಿಸುತ್ತಿದ್ದಾರೆ.

ದಂಡೆ ಬಳಿ ಕಳೆದ ಮೂರು ದಿನಗಳಿಂದ ಸಮುದ್ರ ಇಬ್ಭಾಗವಾಗಿದ್ದು, ಮಧ್ಯದಲ್ಲಿ ಜನರು 1 ಕಿ.ಮೀ ತನಕ ನಡೆದುಕೊಂಡು ಹೋಗಬಹುದಾಗಿದೆ. ಎಡ ಮತ್ತು ಬಲ ಭಾಗದಲ್ಲಿ ನೀರು ಅಲೆಗಳಂತೆ ಸಾಗಿ ಬರುತ್ತಿದ್ದು, ಮಧ್ಯದಲ್ಲಿ ನೀರು ನಿಂತ ಕಾಲು ದಾರಿಯಂತೆ(ಮರಳು ದಂಡೆ ಅಥವಾ ಸ್ಯಾಂಡ್ ಬೆಡ್) ಮಾರ್ಗ ನಿರ್ಮಾಣವಾಗಿದೆ.

 

ಭಾರೀ ಪ್ರವಾಹದಿಂದಾಗಿ ಪೊನ್ನಾನಿ ಸಮುದ್ರದಲ್ಲಿ ನೀರಿನ ಏರಿಳಿತದಲ್ಲಿ ಭಾರೀ ವ್ಯತ್ಯಾಸವಾಗಿರುವುದೇ ಇದಕ್ಕೆ ಕಾರಣ. ಸಮುದ್ರದ ದಂಡೆಯಲ್ಲಿ ಉದ್ದವಾಗಿ ಒಂದು ಕಿಲೋ ಮೀಟರ್ ವರೆಗೆ ಮರಳು ಮಾರ್ಗ ಸೃಷ್ಟಿಯಾಗಿದ್ದು, ಜನರು ಗುಂಪು ಗುಂಪಾಗಿ ಈ ಮಾರ್ಗದಲ್ಲಿ ನಡೆದಾಡುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿವೆ.  ಈ ಹಿಂದೆ ಇಂಥ ವಿಶಿಷ್ಟ ವಿದ್ಯಮಾನವನ್ನು ನಾವು ನೋಡಿಲ್ಲ ಎಂದು ಜನರು ಹೇಳುತ್ತಿದ್ದಾರೆ.

error: Content is protected !! Not allowed copy content from janadhvani.com