ಕಲ್ಲಿಕೋಟೆ, ಸೆ.24: ಎರಡು ವಿಭಾಗ ಸುನ್ನಿಗಳ ಸಮಸ್ತ ಕೇಂದ್ರ ಮುಶಾವರದ ನಿರ್ದೇಶ ಪ್ರಕಾರ ಸುನ್ನಿಗಳ ನಡುವೆ ಐಕ್ಯ ಚರ್ಚೆ ಪ್ರಗತಿಯಲ್ಲಿದೆ. ಪಾಣಕ್ಕಾಡ್ ಸಯ್ಯಿದ್ ಸ್ವಾದಿಖಲಿ ಶಿಹಾಬ್ ತಂಙಳ್ ಚಯರ್ಮಾನ್ ಹಾಗೂ ಡಾ. ಇ.ಎನ್ ಅಬ್ದುಲ್ಲತೀಫ್ ಕನ್ವೀನರ್ ಆಗಿರುವ ಸುನ್ನಿ ಮಸ್ಲಹತ್ ಸಮಿತಿಯ ಶ್ರಮ ಫಲವಾಗಿ ಸುನ್ನೀ ಐಕ್ಯ ಚರ್ಚೆಗೆ ವೇದಿಕೆ ಸಜ್ಜಾಗಿದೆ.
ಒಗ್ಗಟ್ಟಿನ ಪೂರ್ವಭಾವಿಯಾಗಿ ಮೊಹಲ್ಲಾಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಮುಂದಕ್ಕೆ ಸಮಸ್ಯೆಗಳಾಗದಿರುವಂತೆ ನೋಡಿಕೊಳ್ಳಲು ಎರಡು ವಿಭಾಗದವರೂ ಗಮನಹರಿಸಲಿದ್ದಾರೆ. ಮೊಹಲ್ಲಾದ ಈಗಿರುವ ಸ್ಥಿತಿಯಲ್ಲಿ ಬದಲಾವಣೆ ಮಾಡುವುದು, ಸಮಸ್ಯೆ ಸೃಷ್ಟಿಸುವುದು ಮಾಡುವುದಿಲ್ಲ. ಇದಕ್ಕೆ ವಿರುದ್ಧವಾಗಿ ಯಾವುದಾದರೂ ಮೊಹಲ್ಲಾದಲ್ಲಿ ಸಮಸ್ಯೆ ಸೃಷ್ಟಿಯಾದರೆ ನಾಯಕರು ಮಧ್ಯ ಪ್ರವೇಶಿಸಿ ಪೂರ್ವ ಸ್ಥಿತಿಯನ್ನು ಮರುಸ್ಥಾಪಿಸುವುದೆಂದು ಸಭೆ ತೀರ್ಮಾನಿಸಿದೆ ಎಂದು ಸಮಿತಿಯ ಕನ್ವೀನರ್ ತಿಳಿಸಿದ್ದಾರೆ.
ಸಮಸ್ತದ ಎರಡು ವಿಭಾಗವನ್ನು ಪ್ರತಿನಿಧಿಸಿ ಡಾ. ಬಹಾಉದ್ದೀನ್ ನದ್ವಿ, ಡಾ. ಹುಸೈನ್ ಸಖಾಫಿ ಚುಳ್ಳಿಕೋಡ್, ಮುಕ್ಕಂ ಉಮರ್ ಪೈಝಿ, ಎ.ವಿ. ಅಬ್ದುರ್ರಹ್ಮಾನ್ ಮುಸ್ಲಿಯಾರ್, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಕೆ ಕೆ ಮುಹಮ್ಮದ್ ಕುಟ್ಟಿ ಮುಸ್ಲಿಯಾರ್ ಕಟ್ಟಿಪ್ಪಾರ, ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವು ಭಾಗವಹಿಸಿದರು.
ಮೋಹಲ್ಲಾಗಳಲ್ಲಿ ಸಮಸ್ಯೆ ಸೃಷ್ಟಿಸದಿರಿ- ಸಮಸ್ತ ನೆತಾರರು
ಸುನ್ನೀ ಒಗ್ಗಟ್ಟಿನ ಚರ್ಚೆ ನಡೆಯುತ್ತಿರುವುದರಿಂದ ಮೊಹಲ್ಲಾಗಳಲ್ಲಿ ಯಾರೂ ಸಮಸ್ಯೆ ಹುಟ್ಟು ಹಾಕಬಾರದೆಂದು, ನಾಯಕರು ಮತ್ತು ಕಾರ್ಯಕರ್ತರು ಅರೋಪ ಮತ್ತು ಪ್ರತ್ಯಾರೋಪವನ್ನು ಖಡ್ದಾಯವಾಗಿ ನಿಲ್ಲಿಸಬೇಕೆಂದು, ಸಾಮಾಜಿಕ ಜಾಲತಾಣಗಳಲ್ಲಿ ಸುನ್ನಿ ಐಕ್ಯ ವಿರೋಧಿಗಳು ಬರೆಯುವ ಐಕ್ಯತೆಗೆ ವಿರುದ್ಧವಾದ ಲೇಖನಗಳನ್ನು ನಿರುತ್ಸಾಹ ಪಡಿಸಬೇಕೆಂದು ಎರಡು ವಿಭಾಗದ ಉನ್ನತ ನಾಯಕರಾದ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್,ಇ.ಸುಲೈಮಾನ್ ಮುಸ್ಲಿಯಾರ್ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ಪ್ರೋ. ಕೆ. ಆಲಿಕುಟ್ಟಿ ಮುಸ್ಲಿಯಾರ್ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.