janadhvani

Kannada Online News Paper

ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಟೀಂ ಹಸನೈನ್ ಕ್ಯಾಂಪ್

ಬೆಳ್ತಂಗಡಿ: ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ವ್ಯಾಪ್ತಿಯ ಟೀಂ ಹಸನೈನ್ ಕಾರ್ಯಕರ್ತರ ಪ್ರಥಮ ಕ್ಯಾಂಪ್ ಸೆಪ್ಟೆಂಬರ್ 2 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ ನಲ್ಲಿ ರಾತ್ರಿ 7.15 ಕ್ಕೆ ನಡೆಯಿತು.
ಕ್ಯಾಂಪ್ ನಲ್ಲಿ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಅಧ್ಯಕ್ಷರಾದ MAM ಕಾಸಿಂ ಮುಸ್ಲಿಯಾರ್,ಮಾಚಾರು ಸಂಘಟನಾ ತರಬೇತಿ ಹಾಗೂ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಉಪಾಧ್ಯಕ್ಷರಾದ ಅಯ್ಯೂಬ್ ಮಳ್ಹರಿ,ಕಾವಳ್ ಕಟ್ಟೆ ಹಸನೈನ್ ತರಬೇತಿಯನ್ನು ನೀಡಿದರು.

ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಅಧ್ಯಕ್ಷರಾದ MAM ಕಾಸಿಂ ಮುಸ್ಲಿಯಾರ್,ಮಾಚಾರು ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಡಿವಿಷನ್ ನಾಯಕರಾದ ರಶೀದ್ ಮದನಿ ಇಂದಬೆಟ್ಟು ಕಾರ್ಯವನ್ನು ಉದ್ಘಾಟಿಸಿದರು.

ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಉಪಾಧ್ಯಕ್ಷರಾದ ಹಾರಿಸ್ ಕುಕ್ಕುಡಿ, ಕೋಶಾಧಿಕಾರಿಯಾದ ರಶೀದ್ S.A ಶಾಂತಿನಗರ ಹಾಗೂ ಡಿವಿಷನ್ ನಾಯಕರು ಉಪಸ್ಥಿತಿ ಇದ್ದರು

ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರು ಸ್ವಾಗತಿಸಿದರು. ಕಾರ್ಯದರ್ಶಿ ಶರೀಫ್ ಶಾಝ್ ನಾವೂರು ವಂದಿಸಿದರು.

ವರದಿ: ಎಂ.ಎಂ.ಉಜಿರೆ