ಅಲ್-ಹರಮೈನ್ ಅಸೋಸಿಯೇಶನ್ ಸೂರಿಂಜೆ
ಜುಬೈಲ್ ಕಮಿಟಿ ಇದರ ವಾರ್ಷಿಕ ಮಹಾಸಭೆಯು ದಿನಾಂಕ 31/8/2018 ಶುಕ್ರವಾರ ಜುಮಾ ನಮಾಝಿನ ಬಳಿಕ ಜುಬೈಲಿನ DKSC ಆಡಿಟೋರಿಯಮ್ ನಲ್ಲಿ ಜನಾಬ್ ಸುಲೈಮಾನ್ ಮಿಲನ್ ಸೂರಿಂಜೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸುಲೈಮಾನ್ ಮಿಲನ್ ದುಆ ಮೂಲಕ ಸಭೆಗೆ ಚಾಲನೆ ನೀಡಿದರು. ಸಿರಾಜುದ್ದೀನ್ ಕಟ್ಟಹುಣಿ ಕಿರಾಅತ್ ಪಟಿಸಿದರು. ಎಸ್.ಎ ಇಝ್ಝುದ್ಧೀನ್ ಸ್ವಾಗತ ಭಾಷಣದೊಂದಿಗೆ ಸುಲೈಮಾನ್ ಮಿಲನ್ ಸಭೆಯನ್ನು ಉದ್ಘಾಟಿಸಿದರು.ಕಾರ್ಯದರ್ಶಿ ಮುಹಮ್ಮದ್ ರಫೀಖ್ ಶಿಬರೂರು 2016 – 2018 ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು.
ಸಭೆಯಲ್ಲಿ 2018-2019ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು.
ನೂತನ ಸಮಿತಿಯ ಗೌರಾವಾದ್ಯಕ್ಷರಾಗಿ ಅಬ್ದುಲ್ ಹಮೀದ್ ಬೊಳ್ಳಾರ್, ಅಧ್ಯಕ್ಷರಾಗಿ ಅಬ್ದುಲ್ಲ ನಿಶಾನ್ ಮಿಲನ್, ಉಪಾಧ್ಯಕ್ಷರಾಗಿ ಯೂನುಸ್ ಹಾಗೂ ಎಸ್.ಎ ಚೆಯ್ಯ , ಪ್ರಧಾನ ಕಾರ್ಯದರ್ಶಿಯಾಗಿ ಖಲಂದರ್ ಸ್ವಾಧಿಖ್ ಬೊಳ್ಳಾರ್, ಜೊತೆ ಕಾರ್ಯದರ್ಶಿಗಳಾಗಿ ಸಿರಾಜುದ್ಧೀನ್ ಕಟ್ಟಹುಣಿ ಹಾಗೂ ಮುಹಮ್ಮದ್ ರಫೀಖ್ ಶಿಬರೂರು, ಕೋಶಾಧಿಕಾರಿಯಾಗಿ ಎಸ್ ಎ.ಉಬೈದ್, ಸಂಚಾಲಕರನ್ನಾಗಿ
ಇಝ್ಝುದ್ಧೀನ್ ಎಸ್.ಎ, ಫೈಝಲ್ ಎಸ್ ಎ, ಅನ್ಸಾರ್ ಬೊಳ್ಳಾರ್ ಮತ್ತು
ಸಲಹೆಗಾರರನ್ನಾಗಿ ಅಬ್ದುಲ್ ಮಜೀದ್ ಹಾಗು ಫಾರೂಕ್ ಎಸ್.ಎಚ್ ಅವರನ್ನು ಆಯ್ಕೆ ಮಾಡಲಾಯಿತು ಮತ್ತು ಸಭೆಗೆ ಹನ್ನೊಂದು ಮಂದಿಯನ್ನು ಕಾರ್ಯಕಾರಿ ಸದಸ್ಯರನ್ನಾಗಿ ಆರಿಸಲಾಯಿತು.
ಕೊನೆಯಲ್ಲಿ ಎಸ್.ಎ.ಉಬೈದ್’ರವರು ಧನ್ಯವಾದ ಸಲ್ಲಿಸಿದರು ನಂತರ ಸ್ವಲಾತ್ ಹೇಳಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.