ಪಡುಬಿದ್ರಿ: ಎಸ್ಸೆಸ್ಸೆಫ್ ಕಾಪು ಡಿವಿಷನ್ ವ್ಯಾಪ್ತಿಯ ಟೀಂ ಹಸನೈನ್ ಕಾರ್ಯಕರ್ತರ ಪ್ರಥಮ ಕ್ಯಾಂಪ್ ಆಗಸ್ಟ್ 31 ರಂದು ಕಾಪು ಜೆ.ಸಿ.ಐ ಭವನದಲ್ಲಿ ರಾತ್ರಿ 7:30 ಕ್ಕೆ ನಡೆಯಿತು.
ಶಿಬಿರದಲ್ಲಿ ದ.ಕ ಜಿಲ್ಲಾ ಎಸ್ಸೆಸ್ಸೆಫ್ ಕಾರ್ಯದರ್ಶಿ ಯವರಾದ ಮುಹಮ್ಮದ್ ಅಲಿ ತುರ್ಕಳಿಕೆ ಸಂಘಟನಾ ತರಭೇತಿ ಹಾಗೂ ಉಡುಪಿ ಜಿಲ್ಲಾ ಎಸ್ಸೆಸ್ಸೆಫ್ ನಾಯಕರಾದ ಕೆ.ಪಿ. ಶರೀಪ್ ಸಖಾಫಿ ಹಸನೈನ್ ತರಬೇತಿ ಯನ್ನು ನೀಡಿದರು.
ಎಸ್ಸೆಸ್ಸೆಫ್ ಕಾಪು ಡಿವಿಷನ್ ಅದ್ಯಕ್ಷರಾದ ಮುಹ್ಯದ್ದೀನ್ ಸಖಾಫಿ ಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಡಿವಿಷನ್ ಪ್ರ.ಕಾರ್ಯದರ್ಶಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಉಪಾದ್ಯಕ್ಷರಾದ ಅಹ್ಮದ್ ಶಬೀರ್ ಸಖಾಫಿ , ಡಿವಿಷನ್ ಉಪಾಧ್ಯಕ್ಷ ರಾದ ಶಾಹುಲ್ ನ ಈಮಿ, ಡಿವಿಷನ್ ನಾಯಕರಾದ ಮುಸ್ತಫ ಸಖಾಫಿ, ಹಾಗೂ ಸ್ವಾದಿಖ್ ಕೊರಂಟಿಕಟ್ಟೆ, ಶಿರ್ವ ಸೆಕ್ಟರ್ ಅದ್ಯಕ್ಷರಾದ ಸಲೀಂ ಪಿ.ಕೆ, ಉಪಸ್ಥಿತಿ ಇದ್ದರು.
ಡಿವಿಷನ್ ನಾಯಕ ಇಬ್ರಾಹಿಂ ಮಜೂರ್ ಸ್ವಾಗತಿಸಿದರು, ಕಾರ್ಯದರ್ಶಿ ಶಮೀರ್ ಕೋಡಿ ವಂದಿಸಿದರು.