ಸೌದಿ ಅರೇಬಿಯಾದ ರಿಯಾದ್’ನಲ್ಲಿ ಕಳೆದ ಎರಡು ದಶಕಗಳಿಂದ ಪ್ರಶಂಸಾರ್ಹವಾಗಿ ಕಾರ್ಯಾಚರಿಸುತ್ತಿರುವ ಮಂಗಳೂರು ಹಜ್ಜ್-ಉಮ್ರಾ ಗ್ರೂಪ್’ನ ಅಧೀನದಲ್ಲಿ ನೂತನ *ರಫಾ ಟ್ರಾವೆಲ್ಸ್* ಕಚೇರಿಯನ್ನು 30-8-18 ರಂದು ರಿಯಾದ್’ನ ಬತ್ಹ ರೈಲ್ ಸ್ಟ್ರೀಟ್ ‘ಅಲ್ ಮಾಸ್,ಫ್ಯಾಮಿಲಿ ರೆಸ್ಟೋರೆಂಟ್ ಸಮೀಪದ ಸಂಕೀರ್ಣ’ದಲ್ಲಿ ಸಮಸ್ತ ಕೇಂದ್ರ ಮುಶಾಅರ ಸದಸ್ಯರಾದ *ಅಬೂ ಹನೀಫಲ್ ಪೈಝಿ ತೆನ್ನಲ* ಉದ್ಘಾಟಿಸಿದರು.
ನಂತರ ಮಾತನಾಡಿದ ಫೈಝಿಯವರು ಉಮ್ರಾ ಕಚೇರಿಗಳನ್ನು ಬರೇ ವ್ಯಾವಹಾರಿಕವಾಗಿ ಮಾತ್ರ ಕಾಣದೆ ಹಜ್ ಉಮ್ರಾ ಯಾತ್ರಾರ್ಥಿಗಳ ನಿಸ್ವಾರ್ಥ ಸೇವೆ ಗೈಯ್ಯುವಂತೆ ಕರೆ ನೀಡಿದರು.
ಸಮಾರಂಭದಲ್ಲಿ ಎಂ ಟಿ ಅಬ್ದುರ್ರಹ್ಮಾನ್ ದಾರಿಮಿ, ಅಬ್ದುಲ್ಲಾ ಫೈಝಿ, ಅಶ್ರಫ್ ಮದನಿ ಮಡಂತ್ಯಾರು, ಫಾರೂಖ್ ಸಅದಿ,ಇಲ್ಯಾಸ್ ಲತ್ವೀಫಿ,ಝುಬೈರ್ ಮೌಲವಿ,ಸೀಕೆ ಮೌಲವಿ, ಕೆಸಿಎಫ್ ನಾಯಕರಾದ ಸಲೀಂ ಕನ್ಯಾಡಿ, ಸಿದ್ದೀಕ್ ಸಖಾಫಿ ಪೆರುವಾಯಿ,ಹಂಝ ಮೈಂದಾಳ, ಹಾಗೂ ಸಂಸ್ಥೆಯ ಪಾಲುದಾರರಾದ ನಝೀರ್ ಹಾಜಿ ಕಾಶಿಪಟ್ನ ,ಝೈನುದ್ದೀನ್ ಚೆನ್ನೈ ಮೊದಲಾದವರು ಉಪಸ್ಥಿತರಿದ್ದರು.