ಬನ್ನೂರು ಆ12: ಸುನ್ನೀ ಸೆಂಟರ್ ಬನ್ನೂರು ಇದರ ಕಾರ್ಯನಿರ್ವಾಹಕ ಸಮಿತಿಯ2018-19ನೇ ಸಾಲಿನ ವಾರ್ಷಿಕ ಮಹಾಸಭೆಯು ಸುನ್ನೀ ಸೆಂಟರಿನಲ್ಲಿ ಪಾರೂಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್,ವೈ,ಎಸ್ ಬನ್ನೂರು ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್ ಸಭೆಯನ್ನು ಉದ್ಘಾಟಿಸಿದರು.
ಸಮಿತಿ ಕಾರ್ಯದರ್ಶಿ ಸೈಫುಲ್ಲಾಸ ಅದಿ ಒಂದು ವರ್ಷದ ಅವಧಿಯಲ್ಲಿ ನಡೆದ ಕಾರ್ಯಕ್ರಮಗಳನ್ನು ವಿವರಿಸಿ ಲೆಕ್ಕ ಪತ್ರವನ್ನು ಮಂಡಿಸಿದರು.
2018-19ನೇ ಸಾಲಿನ ನೂತನ ಅಧ್ಯಕ್ಷರಾಗಿ ಫಾರೂಕ್ ರವರನ್ನು ಅವಿರೋಧವಾಗಿ ಪುನರಾಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಹಮೀದ್ ಲಕ್ಕಿ ಸ್ಟಾರ್ ಹಾಗೂ ಕೋಶಾಧಿಕಾರಿ ಯಾಗಿ ಅಬ್ದುಲ್ ಖಾದರ್ ರವರನ್ನು ಆಯ್ಕೆ ಮಾಡಲಾಯಿತು. ಲೆಕ್ಕ ಪರಿಶೋಧಕರಾಗಿ ಇಸ್ಮಾಯಿಲ್ ಹಾಜಿಯವರನ್ನು ನೇಮಿಸಲಾಯಿತು.ಕಾರ್ಯಾಕಾರಿಣಿ ಸದಸ್ಯರಾಗಿ ಹದಿನೈದು ಮಂದಿಯನ್ನು ಆಯ್ಕೆ ಮಾಡಲಾಯಿತು.
ಅಬ್ದುರ್ರಹ್ಮಾನ್ ಮದನಿ,ಅಬೂಬಕ್ಕರ್ ಪಾಪ್ಲಿ,ಇಬ್ರಾಹಿಮ್ ಸುಪಾರಿ,ಅಬ್ಬಾಸ್ ಪ್ರೆಸ್ ಮೊದಲಾದವರು ಉಪಸ್ಥಿತರಿದ್ದರು.