ಮಂಜನಾಡಿ ಆ 15 : ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪೂರ್ವಿಕರು ಒಗ್ಗಟ್ಟಾಗಿ ರಂಗಪ್ರವೇಶ ಮಾಡಿದ್ದರು. ಇಂಗ್ಲೀಷ್ ಭಾಷೆಯನ್ನು ಕಲಿಯುವುದು ಹರಾಂ ಆಗಿದೆ ಎನ್ನುವಷ್ಟರ ಮಟ್ಟಿಗೆ ಬ್ರಿಟಿಷರನ್ನು ವಿರೋಧಿಸಿ ಹಾಗೆಂದು ಫತ್ವಾ ಹೊರಡಿಸಿದವರಲ್ಲಿ ಪ್ರಮುಖರಾಗಿರುವರು
ಶಾಹ್ ವಲಿಯುಲ್ಲಾಹಿ ದ್ದಹ್ಲವೀ (ರ) ಎಂದು ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಮುಸ್ಲಿಯಾರ್ ಹೇಳಿದರು.
ಅವರು ಇಂದು ಅಲ್ ಮದೀನ ವಿದ್ಯಾಸಂಸ್ಥೆ ಮಂಜನಾಡಿಯಲ್ಲಿ ಬಿಶಾರತುಲ್ ಮದೀನ ನಡೆಸಿದ 72ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ತಿರಂಗವನ್ನು ಹಾರಾಡಿಸಿದ ನಂತರ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಯುಕ್ತ ಬಿಶಾರತುಲ್ ಮದೀನ ರೂಪಿಸಿರುವ 25 ನೂತನ ಪದ್ಧತಿಗಳಲ್ಲಿ ಒಂದಾದ ಸಮಾಜದ ಲೋಗೋ ಪ್ರಕಾಶನ ಮತ್ತು ಸಂಸ್ಥೆಗೆ ಪೋಡಿಯಂ ಸಮರ್ಪಣೆಯನ್ನುಶರಫುಲ್ ಉಲಮಾ ನೆರವೇರಿಸಿದರು.
ಸಂಸ್ಥೆಯ ನಿರ್ದೇಶಕರಾದ ಮುಹಮ್ಮದ್ ಕುಞ್ಞಿ ಅಂಜದಿ ಉದ್ಘಾಟನೆಗೈದರು .ಸಂಸ್ಥೆಯ ಮುದರ್ರಿಸರು, SSF ಉಳ್ಳಾಲ ಡಿವಿಶನ್ ಅಧ್ಯಕ್ಷರಾಗಿರುವ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು.
ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮುಹಮ್ಮದ್ ಮೋನು, ದ. ಕ. ಜಿಲ್ಲಾ ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷರಾದ ಎನ್.ಎಸ್.ಕರೀಮ್ ಹಾಜಿಯವರು,ಗಣ್ಯ ಉಪಸ್ಥಿತಿಯಾಗಿ ಭಾಗವಹಿಸಿದರು.
ದಅವಾ ಕಾಲೇಜು ಪ್ರಾಂಶುಪಾಲರು ಸಲಾಮ್ ಅಹ್ಸನಿ ಸಂದೇಶ ಭಾಷಣ ಮಾಡಿದರು. ಇಕ್ಬಾಲ್ ಮರ್ಝೂಖಿ ಸಖಾಫಿ 25 ನೂತನ ಯೋಜನೆಯ ಕರಡನ್ನು ಮಂಡಿಸಿದರು. ಸ್ವಾತಂತ್ರ್ಯೋತ್ಸವದ ಪೂರ್ವ ಭಾವಿಯಾಗಿ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜಯಶಾಲಿಯಾದ ಪ್ರತಿಭೆಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಬಿಶಾರತುಲ್ ಮದೀನದ ಅಧ್ಯಕ್ಷರಾದ ಅನೀಸ್ ಸ್ವಾಗತಗೈದರೆ, ನೌಫಲ್ ಮಲಾರ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.