janadhvani

Kannada Online News Paper

ಬಂಟ್ವಾಳ: ಎಸ್ಸೆಸ್ಸೆಫ್ & ಎಸ್‌ವೈಎಸ್ ನಂದಾವರ ಶಾಖೆಯ ವತಿಯಿಂದ ದೇಶದ 72 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಎಸ್‌ವೈಎಸ್ ನಂದಾವರ ಬ್ರಾಂಚ್ ಅಧ್ಯಕ್ಷ ಅಬ್ದುರ್ರಹ್ಮಾನ್ ಮದನಿ ಧ್ವಜಾರೋಹಣ ನೆರವೇರಿಸಿದರು. ಮರಕಡ ಜುಮಾ ಮಸೀದಿಯ ಖತೀಬ್ ಇಸ್ಹಾಖ್ ಸಖಾಫಿ ಸಂದೇಶ ಭಾಷಣ ಮಾಡಿದರು.

ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಶರೀಫ್ ನಂದಾವರ, ಎಸ್‌ವೈಎಸ್ ಸ್ಥಳೀಯ ಮುಖಂಡ ನಝೀರ್ ಮುಸ್ಲಿಯಾರ್ ಜಿ.ಟಿ.ರೋಡ್, ರಫೀಖ್ ಕಿಸ್ವ, ಬೆಂಗಳೂರು ಸ‌ಅದಿಯಾ ಎಜುಕೇಶನ್ ಫೌಂಡೇಶನ್ ನ ಸುಲೈಮಾನ್ ನಿಸಾರ್, ಇಸ್ಮಾಈಲ್ ಕೋಟೆ ಮುಂತಾದವರು ಉಪಸ್ಥಿತರಿದ್ದರು. ಎಸ್‌ವೈಎಸ್ ನಂದಾವರ ಬ್ರಾಂಚ್ ಕಾರ್ಯದರ್ಶಿ ಉಸ್ಮಾನ್ ಮಾಲಿಕ್ ಸ್ವಾಗತಿಸಿ, ಎಸ್ಸೆಸ್ಸೆಫ್ ನಂದಾವರ ಶಾಖೆ ಕಾರ್ಯದರ್ಶಿ ಫಾಮಿದ್ ವಂದಿಸಿದರು.