ನವದೆಹಲಿ (ಆ.15): ದೇಶದ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಆರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 72ನೇ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದರು. ತಮ್ಮ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ, ಅಭಿವೃದ್ಧಿಗೆ ಕೈಗೊಂಡ ಕಾರ್ಯಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ವಿವರಿಸಿದರು. 50 ಕೋಟಿ ಜನರಿಗೆ ತಲುಪುವ ‘ಜನ ಆರೋಗ್ಯ ಅಭಿಯಾನ’ ಯೋಜನೆಯನ್ನು ಪ್ರಕಟಿಸಿದರು ಮತ್ತು 2022ಕ್ಕೆ ಮಾನವಸಹಿತ ಗಗನಯಾನ ಯೋಜನೆ ಬಗ್ಗೆಯೂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ಮೋದಿ ಅವರ ಸ್ವಾತಂತ್ರ್ಯೋತ್ಸವ ಭಾಷಣದ ಐದು ಪ್ರಮುಖಾಂಶಗಳು ಹೀಗಿವೆ.
ಜನ ಆರೋಗ್ಯ ಅಭಿಯಾನ:ದೇಶದ ಬೃಹತ್ ಆರೋಗ್ಯ ರಕ್ಷೆಯ ಯೋಜನೆಯಾದ ‘ಆಯುಷ್ಮಾನ್ ಭಾರತ’ ಯೋಜನೆಯನ್ನು ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ ಹೆಸರಿನಲ್ಲಿ ಮರುಪರಿಚಯಿಸಿದರು. ಇದೇ ವರ್ಷದ ಸೆಪ್ಟೆಂಬರ್ 25ರಂದು ಧೀನ ದಯಾಳು ಉಪಾಧ್ಯ ಅವರ ಜನ್ಮ ದಿನದಂದು ಯೋಜನೆ ಜಾರಿಯಾಗಲಿದೆ. ವರ್ಷಕ್ಕೆ 50 ಕೋಟಿ ಜನರಿಗೆ ಐದು ಲಕ್ಷ ರೂ.ವರೆಗೆ ಫಲಾನುಭವಿಗಳಿಗೆ ಈ ಯೋಜನೆ ಅನುಕೂಲ ಒದಗಿಸಿಕೊಡಲಿದೆ. ಆರೇಳು ವಾರಗಳ ಕಾಲ ಪ್ರಾಯೋಗಿಕವಾಗಿ ಜಾರಿಗೆ ತಂದು ನಂತರ ಅಧಿಕೃತವಾಗಿ ಜಾರಿಗೆ ತರಲಾಗುತ್ತದೆ ಎಂದು ಮೋದಿ ಹೇಳಿದರು.
ಮಾನವಸಹಿತ ಗಗನಯಾನ ಯೋಜನೆ:ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 72ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ 2022ಕ್ಕೆ ಮಾನವಸಹಿತ ಗಗನಯಾನ ಯೋಜನೆಯನ್ನು ಪ್ರಕಟಿಸಿದರು. ಅಲ್ಲದೇ ಒಂದೇ ರಾಕೆಟ್ನಲ್ಲಿ ನೂರು ಸ್ಯಾಟಲೆಟ್ಗಳನ್ನು ಉಡಾವಣೆ ಮಾಡಿ, ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಮೋದಿ ಶ್ಲಾಘಿಸಿದರು. 2022ಕ್ಕೆ ನಾವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತೇವೆ. ಈ ಸಂದರ್ಭದಲ್ಲಿ ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಅದಕ್ಕಾಗಿ ಗಗನಯಾನ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ನಾವು ಯಶಸ್ವಿಯಾದರೆ ಮಾನವಸಹಿತ ಬಾಹ್ಯಾಕಾಶ ಯಾನ ಮಾಡಿದ ನಾಲ್ಕನೆ ದೇಶ ಭಾರತವಾಗಲಿದೆ ಎಂದು ಮೋದಿ ಹೇಳಿದರು.
ಮಲಗಿದ್ದ ಆನೆ ಎಚ್ಚರವಾಗಿದೆ:ದೇಶದ ಆರ್ಥಿಕ ಬೆಳವಣಿಗೆ ಬಗ್ಗೆಯೂ ಮಾತನಾಡಿದ ಮೋದಿ, ಮುಂದಿನ ಮೂರು ದಶಕದಲ್ಲಿ ಭಾರತದ ಆರ್ಥಿಕತೆ ಜಾಗತಿಕವಾಗಿ ಪ್ರಬಲವಾಗಲಿದೆ. ಮಲಗಿರುವ ಆನೆ ಎದ್ದು ಓಡುವಂತೆ ದೇಶದ ಆರ್ಥಿಕತೆ ಪ್ರಗತಿ ಸಾಧಿಸಲಿದೆ. ನಾಲ್ಕು ವರ್ಷಗಳ ಆಡಳಿತದಲ್ಲಿ ಭಾರತ ಅತಿಹೆಚ್ಚು ವೇಗವಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ ಎಂದು ಮೋದಿ ಹೇಳಿದರು.
2013ರಿಂದ ದ್ವಿಗುಣವಾದ ತೆರಿಗೆ ಪಾವತಿದಾರರು:ಕಳೆದ ಮೂರು ವರ್ಷಗಳಲ್ಲಿ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಏರಿಕೆ ಆಗಿರುವುದನ್ನು ಹೇಳಿದರು. 2013ಕ್ಕೆ ಹೊಲಿಸಿದರೆ ಈಗ ತೆರಿಗೆ ಪಾವತಿದಾರರ ಸಂಖ್ಯೆ ದ್ವಿಗುಣವಾಗಿದೆ. 2013ರಲ್ಲಿ 3 ಕೋಟಿ ಮಂದಿ ತೆರಿಗೆ ಪಾವತಿದಾರರು ಇದ್ದರು. ಇದೀಗ ಆ ಸಂಖ್ಯೆ 7.25 ಆಗಿದೆ. ತೆರಿಗೆ ಪಾವತಿಯಲ್ಲಿ ಈಗ ಯಾವುದೇ ಮಧ್ಯವರ್ತಿಗಳಿಲ್ಲ, ನೇರವಾಗಿ ಜನರೇ ಸರ್ಕಾರಕ್ಕೆ ತೆರಿಗೆ ಪಾವತಿಸುವಂತೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಮೂರು ಲಕ್ಷ ಅಂತಹ ಕಂಪನಿಗಳನ್ನು ಮುಚ್ಚಲಾಗಿದೆ ಎಂದು ಹೇಳಿದರು.
ಅಲ್ಪಸಂಖ್ಯಾತರಿಗಾಗಿ ಹೋರಾಟ:ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ತ್ರಿವಳಿ ತಲಾಖ್ ಮಸೂದೆಗೆ ಸಂಸತ್ನಲ್ಲಿ ತಡೆಯೊಡ್ಡಿದ ವಿರೋಧ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರ ಸರ್ಕಾರ ಮುಸ್ಲಿಂ ಸಹೋದರಿಯರ ಹಕ್ಕುಗಳ ರಕ್ಷಣೆಗೆ ಸದಾ ಬದ್ಧವಾಗಿದೆ. ಅವರ ರಕ್ಷಣೆಯ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ತ್ರಿವಳಿ ತಲಾಖ್ ವಿರುದ್ಧ ಕಾಯ್ದೆ ತರಲು ಕಟಿಬದ್ಧವಾಗಿದೆ ಎಂದರು.
ಭಾರತ ದೇಶದ ಸಾಮಾನ್ಯ ಪ್ರಜೆಗಳ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಂಡ ಮೋದಿ