ಪ್ರವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಒಮಾನ್ ರಾಷ್ಟ್ರೀಯ ಸಮಿತಿ ವತಿಯಿಂದ ಭವ್ಯ ಭಾರತದ 72ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ದಿನಾಂಕ 17-08-2018 ನೇ ಶುಕ್ರವಾರ ಅಪರಾಹ್ನ 4ರಿಂದ 6 ರವರೆಗೆ ಮಸ್ಕತ್ ನ ರುವಿಯ ಖಾನ ಖಝಾನ ರೆಸ್ಟೋರೆಂಟ್ನಲ್ಲಿ “ಪ್ರಜಾ ಸಂಗಮ” ಕಾರ್ಯಕ್ರಮ ನಡೆಯಲಿದೆ. ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಸಯ್ಯದ್ ಆಬಿದ್ ಅಲ್ ಹೈದ್ರೋಸ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಂಗಮದಲ್ಲಿ ಕಲಂದರ್ ಬಾವ ಪರಪ್ಪು ಮುಖ್ಯ ಭಾಷಣಗೈಯಲಿದ್ದಾರೆ. ಮುಖ್ಯ ಅಥಿತಿಗಳಾಗಿ ಕರುಣಾಕರ ರಾವ್ ಅಧ್ಯಕ್ಷರು ಕರ್ನಾಟಕ ಸಂಘ ಒಮಾನ್, ಶಶಿದರ್ ಶೆಟ್ಟಿ ಚಯರ್ಮೆನ್ ಅಲ್ ಅಬೀರ್ ಗ್ರೂಪ್, ಎಸ್ ಕೆ ಪೂಜಾರಿ ಅಧ್ಯಕ್ಷರು ಬಿಲ್ಲವ ಸಮಾಜ ಮಸ್ಕತ್ ಇವರು ಭಾಗವಹಿಸಲಿದ್ದಾರೆ.
ಭವ್ಯ ಭಾರತದ 72ನೇ ಸ್ವಾತಂತ್ರ್ಯದ ಅಂಗವಾಗಿ “ಭಾರತ ಭಾರತೀಯರದ್ದಾಗಲಿ” ಎಂಬ ಶೀರ್ಷಿಕೆ ಅಡಿಯಲ್ಲಿ ಒಮಾನಿನಲ್ಲಿರುವ ಕನ್ನಡಿಗರಿಗಾಗಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಸಾರ್ವಜನಿಕ ಪ್ರಭಂಧ ಸ್ಪರ್ಧೆಯನ್ನು ಅಯೋಜಿಸಿದೆ