janadhvani

Kannada Online News Paper

ಸಾರ್ವಜನಿಕ ಕ್ಷಮಾಪಣೆ: ಶಹಾಮ ಕೇಂದ್ರಗಳಲ್ಲಿ ಭಾರೀ ಜನದಟ್ಟಣೆ

ಅಬುಧಾಬಿ: ಸಾರ್ವಜನಿಕ ಕ್ಷಮಾಪಣೆಯನ್ನು ಜಾರಿಗೊಳಿಸಲಾದ 2ನೇ ದಿನ ಗುರುವಾರ ಷಹಾಮ ಕೇಂದ್ರಗಳಲ್ಲಿ ಭಾರೀ ಜನದಟ್ಟಣೆ ಕಂಡುಬಂದಿದೆ. ಶಹಮಾ ಕೇಂದ್ರದಲ್ಲಿ ವಿವಿಧ ದೇಶಗಳ 1,000ಕ್ಕಿಂತಲೂ ಹೆಚ್ಚಿನ ಜನರು ಅರ್ಜಿ ಸಲ್ಲಿಸಿದ್ದಾರೆ.
ಇವುಗಳಲ್ಲಿ ಹೆಚ್ಚಿನವರ ವಿಸಾ ಕಾಲಾವಧಿ ಮುಗಿದಿದೆ, ಕಾರ್ಮಿಕ ವಿವಾದದ ಪ್ರಕರಣ, ಕಂಪನಿಯು ಸ್ಥಗಿತಗೊಂಡು ವೃತ್ತಿ ಕಳಕೊಂಡವರು, ಪ್ರಾಯೋಜಕರು ಕೈಬಿಟ್ಟವರೂ ಇದ್ದಾರೆ ಎನ್ನಲಾಗಿದೆ.

ಮೊದಲ ಅರ್ಜಿಯನ್ನು ಫಿಲಿಪೈನ್ಸ್ ನ ಮರಿಕಾರ್ ಪೆರಾಲ್ಟಾ ಅವರು ಬುಧವಾರ ಸಲ್ಲಿಸಿದ್ದಾರೆ.
ಮನೆಕೆಲಸದವರಾದ ಆಕೆಯ ವೀಸಾ ಮುಕ್ತಾಯಗೊಂಡು ನಾಲ್ಕು ತಿಂಗಳು ಕಳೆದಿವೆ. ಈ ಹಿಂದೆಯೇ ನಿಶ್ಚಿತಗೊಂಡಂತೆ ತನ್ನ ಮದುವೆ ನಡೆಯಬೇಕಾದರೆ ರವಿವಾರ ಊರಿಗೆ ತಲುಪಬೇಕೆಂಬುದು ಅವರ ಮನವಿಯಾಗಿತ್ತು.

ಬೆಳಗ್ಗೆ 8 ಗಂಟೆಗೆ ಸಾರ್ವಜನಿಕ ಕ್ಷಮಾಪಣಾ ಕೇಂದ್ರದ ಮುಂದೆ ಭಾರೀ ಜನಜಂಗುಳಿ ಕಂಡುಬಂದಿರುವುದಾಗಿ ವರದಿಯಾಗಿದೆ. ಸಂಜೆ ಐದು ಗಂಟೆಗೂ ಡೇರೆಗಳ ಹೊರಗೆ ಕಾದು ನಿಂತವರಿಗೆ ರವಿವಾರ ಬರುವಂತೆ ಅಧಿಕಾರಿಗಳು ಸೂಚನೆ ನೀಡಿದರು. ಗಡಿ ಪ್ರದೇಶವಾದ ಗುವೈಫಾದಿಂದಲೂ ಜನರು ಬರುತ್ತಿದ್ದಾರೆ.

ಸಾರ್ವಜನಿಕ ಕ್ಷಮಾಪಣೆ ಕೇಂದ್ರದತ್ತ ಹರಿಯುತ್ತಿದೆ ಜನಸಂದಣಿ

ನಗರದಿಂದ 35 ಕಿಮೀ ದೂರದಲ್ಲಿರುವ ಶಹಮಾ ಬಸ್ ನಿಲ್ದಾಣಕ್ಕೆ ಹತ್ತಿರವಿರುವ ಸಾರ್ವಜನಿಕ ಕ್ಷಮಾಪಣೆ ಕೇಂದ್ರಕ್ಕೆ ಜನರು ಬಸ್ ಅಥವಾ ಕಾರುಗಳ ಮೂಲಕ ಬರುತ್ತಿದ್ದಾರೆ.

ಅಲ್ ಗರ್ಬಿಯಾ ಮತ್ತು ಅಲ್ ಐನ್ನಲ್ಲಿನ ಸಾರ್ವಜನಿಕ ಕ್ಷಮಾಪಣೆ ಕೇಂದ್ರವನ್ನು ತೆರೆಯಲಾಗಿದ್ದು, ಅಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ಅಬುಧಾಬಿ ಏವಿಯೇಷನ್ ಇಲಾಖೆಯ ನಿರ್ದೇಶಕ ಬ್ರಿಗೇಡಿಯರ್ ಜನರಲ್ ಸ‌ಈದ್ ಸಲಾಮ್ ಅಲ್-ಶಮ್ಸಿ ತಿಳಿಸಿದ್ದಾರೆ.

ಐಡಿ ಅಸ್ತಿತ್ವದಲ್ಲಿದ್ದರೆ ಪ್ರಕ್ರಿಯೆ ತ್ವರಿತವಾಗಿರುತ್ತದೆ

ಎಮಿರೇಟ್ಸ್ ಐಡಿ ಹೊಂದಿರುವವರು ಟೈಪಿಂಗ್ ಸೆಂಟರ್‌ನಲ್ಲಿ ಅರ್ಜಿಯನ್ನು ತುಂಬಿಸಿ ವಲಸೆ ಕಾರ್ಯಾಲಯದಲ್ಲಿ ನಿರ್ಗಮನ ಪಾಸ್ ಗೆ ಅರ್ಜಿಯನ್ನು ಸಲ್ಲಿಸಿದರೆ ಸಾಕು. ಅರ್ಜಿದಾರರು ಎರಡು ದಿನಗಳೊಳಗೆ ನಿರ್ಗಮನ ಪಾಸ್ ಪಡೆಯುತ್ತಾರೆ. ದಾಖಲೆಗಳನ್ನು ಹೊಂದಿರದವರು ತಮ್ಮ ರಾಯಭಾರ ಅಥವಾ ಬಿಎಲ್ಎಸ್ ಕೇಂದ್ರಗಳಲ್ಲಿ ಔಟ್ ಪಾಸ್ ಪಡೆದ ನಂತರ ಈ ಕೇಂದ್ರಕ್ಕೆ ತಲುಪಬೇಕು.ಕೆಲಸ ಹುಡುಕುವುದಕ್ಕಾಗಿ ತಾತ್ಕಾಲಿಕ ವೀಸಾಗಳಿಗಾಗಿ ಅಗತ್ಯವಿರುವವರು  ನೇರವಾಗಿ ಶಹಮಾ ಕೇಂದ್ರದ  ಇಮಿಗ್ರೇಶನ್ ಕೌಂಟರ್ ಗೆ ತೆರಳುವಂತೆ ತಿಳಿಸಲಾಗಿದೆ.

ಸಮಸ್ಯೆಯಾದ ಭಾಷೆ

ದಾಖಲೆ ಸರಿಪಡಿಸಿ ಯುಎಇಯಲ್ಲಿ ಮುಂದುವರಿಯುವ ಉದ್ದೇಶದಿಂದ ಕಾಸರಗೋಡಿನ ಇಸ್ಮಾಯಿಲ್, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ರುವೈಸ್‌ನಿಂದ ಬಂದರೂ, ಅವರ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ . ಇಸ್ಮಾಯಿಲ್ ಮತ್ತೊಂದು ಕಂಪನಿಗೆ ಸ್ಥಳಾಂತರಗೊಂಡಾಗ, ಕುಟುಂಬದ ವೀಸಾವನ್ನು ಬದಲಿಸಿರಲಿಲ್ಲ ಅದು ಅವರಿಗೆ ಮುಳುವಾಗಿತ್ತು.

ವಿಸಾ ಅವಧಿ ಮುಗಿದು ಆರು ತಿಂಗಳಾಗಿದ್ದು, ಗಂಟೆಗಳವರೆಗೆ ಕ್ಯೂ ನಿಂತು ಅಧಿಕಾರಿಗಳಿಗೆ ಕಾರ್ಯ ತಿಳಿಸಿದಾಗ, ಅಪ್ಲಿಕೇಶನ್ ಗಾಗಿ ಅರ್ಜಿ ಸಲ್ಲಿಸಲು ತಹ್ಸೀಲ್ ಕೇಂದ್ರಕ್ಕೆ ತೆರಳುವಂತೆ  ಸೂಚಿಸಲಾಗಿದೆ. ತಹ್ಸೀಲ್ ಕೇಂದ್ರದಿಂದ ಸಾರ್ವಜನಿಕ ಕ್ಷಮಾಪಣೆ ಕೇಂದ್ರಕ್ಕೆ ಕಳುಹಿಸಲಾಗಿದೆ. ಅಲ್ಲಿನ ಅಧಿಕಾರಿಗಳು ಮರಳಿ ತಹ್ಸೀಲ್ ಕೇಂದ್ರಕ್ಕೆ ಹೋಗುವಂತೆ ಹೇಳಿದರು. ಭಾಷೆಯ ಸಂವಹನವೇ ಅನೇಕರಿಗೆ ಸಮಸ್ಯೆಯಾಗಿದೆ ಎನ್ನಲಾಗಿದೆ.

error: Content is protected !! Not allowed copy content from janadhvani.com