ರಿಯಾದ್: ಸೌದಿ ಅರೇಬಿಯಾದಲ್ಲಿನ ವಿದೇಶೀ ಕಾರ್ಮಿಕರು ತಮ್ಮ ವಾಸ ಅನುಮತಿಯನ್ನು ನವೀಕರಿಸಲು ಇನ್ನುಮುಂದೆ ವಸತಿ ಸಚಿವಾಲಯದ ಬಾಡಿಗೆ ಒಪ್ಪಂದದಲ್ಲಿ ನೋಂದಾಯಿಸುವ ಪ್ರಕ್ರಿಯೆಯು ಮುಂದಿನ ತಿಂಗಳಿನಿಂದ ಕಾರ್ಯರೂಪಕ್ಕೆ ಬರಲಿದೆ.
ಒದಕ್ಕಿಂದ ಹೆಚ್ಚಿನ ಮಂದಿ ಒಂದೇ ಫ್ಲಾಟ್ನಲ್ಲಿ ವಾಸವಿದ್ದಲ್ಲಿ ವಾಸವಿರುವವರ ವಿವರಗಳನ್ನು ಬಾಡಿಗೆ ಒಪ್ಪಂದದಲ್ಲಿ ನಮೂದಿಸಬೇಕು ಎಂದು ಸಚಿವಾಲಯ ತಿಳಿಸಿದೆ.
ವಿದೇಶೀ ಕಾರ್ಮಿಕರ ಕೆಲಸ ಪರವಾನಗಿ, ಇಖಾಮಾ ಮುಂತಾದವುಗಳನ್ನು ವಸತಿ ಸಚಿವಾಲಯದ ಇಜಾರ್ ನೆಟ್ವರ್ಕ್ನಲ್ಲಿ ಬಾಡಿಗೆ ಒಪ್ಪಂದಕ್ಕೆ ನೋಂದಣಿ ಮಾಡಬೇಕು ಇಲ್ಲದಿದ್ದಲ್ಲಿ ಇಖಾಮಾ ನವೀಕರಿಸಲಾಗುವುದಿಲ್ಲ ಎಂದು ಸಚಿವಾಲಯ ವ್ಯಕ್ತಪಡಿಸಿದೆ.
ಸೌದಿಯಲ್ಲಿ ಒಂದೇ ಫ್ಲಾಟ್‌ನಲ್ಲಿ ವಿವಿಧ ಕೆಲಸದಾತರ ಕೈಕೆಳಗೆ ಕೆಲಸ ಮಾಡುವವರು ಒಂದಾಗಿ ವಾಸವಿರುವುದು ಸಾಮಾನ್ಯವಾಗಿದೆ. ಹೊಸ ಕಾನೂನಿನಿಂದಾಗಿ ಬೇರೆ ಕಡೆ ವಾಸಸ್ಥಳ ಹುಡುಕಿ ಬಾಡಿಗೆ ಒಪ್ಪಂದ ಮಾಡಬೇಕಾಗ ಬಹುದೋ ಎಂದು ಅನಿವಾಸಿಗಳಿಗೆ ಆತಂಕ ಎದುರಾಗಿತ್ತು. ಆದರೆ ವಸತಿ ಸಚಿವಾಲಯದ ಸ್ಪಷ್ಟೀಕರಣದಿಂದ ಅವರಲ್ಲಿ ಸ್ವಲ್ಪಮಟ್ಟಿಗೆ ಆಶಾ ಭಾವ ಉಂಟಾಗಿದೆ.
ಕಟ್ಟಡಗಳ ದುರಸ್ತಿ ಕಾರ್ಯಗಳು ಕಟ್ಟಡ ಮಾಲಿಕರ ಜವಾಬ್ದಾರಿಯಾಗಿದೆ. ಇದಕ್ಕೆ ಅಸಮ್ಮತಿ ಸೂಚಿಸುವ ಮಾಲಿಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಬಾಡಿಗೆದಾರರಿಗೆ ಅವಕಾಶವಿದೆ. ಬಾಡಿಗೆದಾರ ಮತ್ತು ಕಟ್ಟಡ ಮಾಲಿಕನ ನಡುವೆ ಉಂಟಾಗುವ ತರ್ಕಗಳಿಗೆ ಪರಿಹಾರ ನೀಡಬಲ್ಲ ಕಾನೂನು ನಿರ್ದೇಶನ ಗಳನ್ನು ವಸತಿ ಸಚಿವಾಲಯ ಬಿಡುಗಡೆಗೊಳಿಸಿದೆ.