janadhvani

Kannada Online News Paper

ಮಶಾಇರ್ ರೈಲು ಪರೀಕ್ಷಣಾ ಓಟ ಪೂರ್ಣ-ಟಿಕೆಟ್ ದರ 400 ರಿಯಾಲ್ ಗೆ ಏರಿಕೆ

ಮಿನಾ: ಈ ವರ್ಷ ಹಜ್ ನಿರ್ವಹಿಸಲಿರುವ ಹಜ್ಜಾಜ್‌ಗಳಿಗೆ, ಹಜ್‌ನ ಪ್ರಧಾನ ಕರ್ಮಗಳನ್ನು ನಿರ್ವಹಿಸಬೇಕಾದ ಸ್ಥಳಗಳಾದ ಅರಫಾ, ಮಿನಾ, ಮುಝ್ದಲಿಫಾ ಮುಂತಾಡೆಗೆ ಸಂಚರಿಸಲು ‘ಮಶಾಇರ್ ರೈಲು ತನ್ನ ಪರೀಕ್ಷಣಾ ಓಟವನ್ನು ಪೂರೈಸಿರುವುದಾಗಿ ಹಜ್ ಸಚಿವಾಲಯ ತಿಳಿಸಿದೆ. ಹೆಚ್ಚಿನ ಸೌಕರ್ಯಗಳನ್ನು ಈ ಬಾರಿ ಒದಗಿಸಿರುವುದಾಗಿಯೂ ಸಚಿವಾಲಯ ವ್ಯಕ್ತಪಡಿಸಿದೆ.

ಕಡಿಮೆ ದರದಲ್ಲಿ ಮಶಾಇರ್ ರೈಲು ಗಾಡಿಯು, ಅತೀ ವೇಗ ಮತ್ತು ಉತ್ತಮ ಸೇವೆಯನ್ನು ನೀಡಲಿದೆ. ಈ ರೈಲು ಗಾಡಿಯು ಅರಫಾ, ಮಿನಾ, ಮುಝ್ದಲಿಫಾ ವಲಯಗಳನ್ನು ಜೋಡಿಸಲಿದ್ದು, 2010 ರಲ್ಲಿ ಪ್ರಥಮ ಸರ್ವೀಸ್ ನಡೆಸಿದ್ದವು.

ಈ ವರ್ಷ ದರವನ್ನು 400 ರಿಯಾಲ್‌ಗೆ ಏರಿಸಲಾಗಿದ್ದು, ಕಳೆದ ವರ್ಷದ ವರೆಗೆ ಇದು 250 ರಿಯಾಲ್ ಆಗಿತ್ತು.

error: Content is protected !! Not allowed copy content from janadhvani.com