ಜಿದ್ದಾ: ಸೇವಾ ಚಟುವಟಿಕೆಗಳಿಗಾಗಿ ಸೌದಿ ಅರೇಬಿಯಾ ನೀಡುವ ವಿಸಾವನ್ನು ದುರ್ಬಳಕೆ ಮಾಡುವುದನ್ನು ತಡೆಗಟ್ಟಲು ತಪಾಸಣೆಯನ್ನು ಪ್ರಾರಂಭಿಸಲಾಗಿದೆ. ಪ್ರವೇಶ ದ್ವಾರಗಳಾದ ವಿಮಾನ ನಿಲ್ದಾಣ, ಬಂದರು, ಗಡಿ ಚೆಕ್ ಪೋಸ್ಟ್ ನಲ್ಲಿ ಕಾರ್ಮಿಕ, ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ತಪಾಸಣೆಯನ್ನು ಊರ್ಜಿತಗೊಳಿಸಿದೆ. ಇದು ಮಕ್ಕಾ ಮತ್ತು ಮದೀನಾದಲ್ಲೂ ಮುಂದುವರಿಯುವುದು.
ಹಜ್ ಸೇವಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ವಿಸಾ ಜಾರಿಗೊಳಿಸಲಾಗಿದ್ದವು. ನೀಡಲಾದ ವೀಸಾಗಳ ಸಂಪೂರ್ಣ ಮಾಹಿತಿಯನ್ನು ನೀಡಲಾದ ಸಂಸ್ಥೆಗಳಿಂದ ಪರಿಶೀಲಿಸಲಿದ್ದೇವೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಖಲೀಲ್ ಅಬಲ್ ಖೈಲ್ ಅವರು ತಿಳಿಸಿದ್ದಾರೆ.
ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಹಜ್ ವೀಸಾ ಕಾನೂನು ನಿಂದನೆ ಕಂಡು ಬಂದಲ್ಲಿ 19911 ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಸೂಚನೆ ನೀಡುವಂತೆ ಅವರು ಮನವಿ ಮಾಡಿದ್ದಾರೆ.