ಮದೀನಾ:(ಜನಧ್ವನಿ ವಾರ್ತೆ) ವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಕರ್ನಾಟಕದ ಮಂಗಳೂರಿನಿಂದ ಆಗಮಿಸಿದ ಹಜ್ಜಾಜಿಗಳ ತಂಡ ಶನಿವಾರದಂದು ಮದೀನಾ ಮುನವ್ವರದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣ ತಲುಪಿತು. ಹಜ್ ಕರ್ಮ ನಿರ್ವಹಿಸಲು ಆಗಮಿಸಿದ ನಾವು ಯಾವುದೇ ತೊಂದರೆ ಯಿಲ್ಲದೇ ಮದೀನಾ ತಲುಪಿದ್ದು ಬಹಳ ಸಂತೋಷವಾಗಿದೆ. ಕೆಸಿಎಫ್ ಕಾರ್ಯಕರ್ತರು ನಮ್ಮನ್ನು ಆದರದಿಂದ ಸ್ವಾಗತಿಸಿ, ಎಲ್ಲಾ ಹಾಜಿಗಳಿಗೆ ಧೈರ್ಯ ತುಂಬಿದ್ದಾರೆ ಎಂದು ಬಜ್ಪೆ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ತಿಳಿಸಿದರು.
ಹಜ್ಜಾಜಿಗಳ ತಂಗುವ ವಸತಿಗಳಿಗೆ ತೆರಳಿದ ಹೆಚ್.ವಿ.ಸಿ ಕಾರ್ಯಕರ್ತರು ದಣಿದು ಬಂದ ಹಜ್ಜಾಜಿಗಳಿಗೆ ಹಣ್ಣು ಹಂಪಲು ನೀಡಿ, ಹಜ್ಜಾಜಿಗಳ ಕೊಠಡಿಗಳಿಗೆ ಲಗೇಜ್ ಸಾಗಿಸಲು ಸಹಕರಿಸಿದರು.
146 ಹಜ್ಜಾಜಿಗಳು ಶನಿವಾರ ದಂದು ಮದೀನಾಕ್ಕೆ ಆಗಮಿಸಿದ್ದು, ಭಾನುವಾರ ಹಾಗೂ ಸೋಮವಾರವು ಕೂಡ ಹಜ್ಜಾಜಿಗಳು ಮದೀನಾ ಆಗಮಿಸಲಿದ್ದಾರೆ.
ಎಲ್ಲಾ ಹಾಜಿಗಳಿಗೆ ದಿನದ 24 ಗಂಟೆಗಳ ಕಾಲ ಅಗತ್ಯವಿರುವ ಸೇವೆ ನೀಡಲು ಕೆಸಿಎಫ್ ಹೆಚ್.ವಿ.ಸಿ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ ಎಂದು ಹೆಚ್.ವಿ.ಸಿ ರಾಷ್ಟ್ರೀಯ ಸಮಿತಿ ಕನ್ವೀನರ್ ಸೆಲೀಂ ಕನ್ಯಾಡಿ ತಿಳಿಸಿದ್ದಾರೆ. ಈ ವೇಳೆ ಕೆಸಿಎಫ್ ಹೆಚ್.ವಿ.ಸಿ ಮದೀನಾ ಚೇರ್ಮೆನ್ ತಾಜುದ್ದೀನ್ ಸುಳ್ಯ, ಕನ್ವೀನರ್ ರಝಾಕ್ ಸಂತೋಷ್ ನಗರ , ಫಾರೂಖ್ ನಈಮಿ, ಜಬ್ಬಾರ್ ಉಪ್ಪಿನಂಗಡಿ, ರಝಾಕ್ ಬೈತಡ್ಕ,ಅಶ್ರಫ್ ಸಖಾಫಿ ನೂಜಿ, ಇಕ್ಬಾಲ್ ಕುಪ್ಪೆಪದವು, ಮತ್ತಿತರ ಕೆಸಿಎಫ್ ಹೆಚ್.ವಿ.ಸಿ ಕಾರ್ಯಕರ್ತರು ಉಪಸ್ಥಿತರಿದ್ದರು .
ವರದಿ : ಹಕೀಂ ಬೋಳಾರ್