janadhvani

Kannada Online News Paper

ತಸ್ರೀಹ್ ರಹಿತ ಮಕ್ಕಾ ಪ್ರವೇಶವನ್ನು ತಡೆಯಲು ಮುನ್ನೆಚ್ಚರಿಕೆ

ಮಕ್ಕಾ: ಹಜ್ ಪರ್ಮಿಟ್ (ತಸ್ರೀಹ್) ಹೊಂದದೇ ಮಕ್ಕಾವನ್ನು ಪ್ರವೇಶಿಸುವುದನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ.

ಕಾನೂನು ಉಲ್ಲಂಘನೆದಾರರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸೌದಿ ಅಧಿಕಾರಿಗಳು ಹೇಳಿದ್ದಾರೆ.

ಹಜ್ ಅನುಮತಿಯಿಲ್ಲದೆ ಮಕ್ಕಾಗೆ ಪ್ರವೇಶಿಸಲು ಶ್ರಪಡುವ ವಿದೇಶಿಗಳ ಬೆರಳಚ್ಚುಗಳನ್ನು ಸಂಗ್ರಹಿಸಲಾಗುವುದು ಮತ್ತು ಅವರ ಇಖಾಮಾವನ್ನು ಮರಳಿಸಲಾಗುವುದಿಲ್ಲ. ಮಾತ್ರವಲ್ಲದೆ ಅವರನ್ನು ಗಡೀಪಾರು ಮಾಡಲಾಗುತ್ತದೆ.