janadhvani

Kannada Online News Paper

ಎಸ್.ಜೆ.ಎಂ. ನಾವುಂದ ರೇಂಜ್ :ನೂತನ ಸಾರಥಿಗಳು

ಕುಂದಾಪುರ: ಅಖಿಲ ಭಾರತ ಸುನ್ನೀ ಜಂ- ಇಯ್ಯತುಲ್ ಮುಅಲ್ಲಿಮೀನ್ (ರಿ.) ಎಸ್.ಜೆ.ಎಂ. ನಾವುಂದ ರೇಂಜ್ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕೇಂದ್ರ ಮದ್ರಸ ನಾವುಂದ ಬುಸ್ತಾನುಲ್ ಉಲೂಂ ಮದ್ರಸಾ ಹಾಲಿನಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು.

ವಿದ್ಯಾಭ್ಯಾಸ ಬೋರ್ಡು ಮುಫತ್ತಿಷ್ ಹಸನ್ ಸಖಾಫಿ ರವರ ಸಭಾಧ್ಯಕ್ಷತೆಯಲ್ಲಿ ನಡೆದ ಸದ್ರಿ ಮಹಾಸಭೆಯನ್ನು ಸ್ಥಳೀಯ ಮುದರ್ರಿಸ್ ಹಾಜಿ ಇಕ್ರಾಮುಲ್ಲಾ ಕಾಮಿಲ್ ಸಖಾಫಿ ಉದ್ಘಾಟಿಸಿ ಶುಭಹಾರೈಸಿದರು. ಹೆಮ್ಮಾಡಿ ಖತೀಬ್ ಮಸೂದ್ ಅಹ್ಸನಿಯವರು ಪವಿತ್ರ ಖುರ್’ಆನ್ ಪಾರಾಯಣ ಗೈದ ಬಳಿಕ, ರೇಂಜ್ ಪ್ರ.ಕಾರ್ಯದರ್ಶಿ ಉಮರುಲ್ ಫಾರೂಖ್ ಸಖಾಫಿ ಬಡಾಕೆರೆ ಮೂರು ವರ್ಷದ ವಾರ್ಷಿಕ ವರದಿ ಹಾಗೂ ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿದರು.

ನಾವುಂದ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ತೌಫೀಖ್ ಅಬ್ದುಲ್ಲಾ ಹಾಜಿ, ಎಸ್.ಎಂ.ಎ.ನಾವುಂದ ರೀಜಿನಲ್ ಅಧ್ಯಕ್ಷ ಬಿ.ಎಸ್. ಮೊಯಿದೀನ್ ಎಂಬವರು ಮಾತನಾಡಿ ರೇಂಜಿನ ಎಲ್ಲಾ ಕ್ರಾಂತಿಕಾರಿ ಕಾರ್ಯಗಳನ್ನು ಸ್ಮರಿಸುತ್ತಾ ರೇಂಜಿಗೆ ಶುಭ ಹಾರೈಸಿದರು.

ಕೇಂದ್ರ ಸಮಿತಿಯ ನಿರ್ದೇಶನದಂತೆ ಜಿಲ್ಲಾ ಸಮಿತಿಯಿಂದ ರಿಟೈನಿಂಗ್ ಆಫೀಸರಾಗಿ ಆಗಮಿಸಿದ ಹಂಗಳೂರು ಮುಹಮ್ಮದ್ ಅಶ್ರಫ್ ಮುಸ್ಲಿಯಾರ್ ರವರು ನೂತನ ಸಮಿತಿಯ ಆಯ್ಕೆ- ಪ್ರಕ್ರಿಯೆಗೆ ನೇತೃತ್ವ ನೀಡಿ ನೂತನ ಸಮಿತಿಯನ್ನು ಈ ಕೆಳಗಿನಂತೆ ಆರಿಸಲಾಯಿತು.

ಅಧ್ಯಕ್ಷರಾಗಿ ಮುಸ್ತಫಾ ಸಅದಿ ಮಾವಿನಕಟ್ಟೆ, ಪ್ರ. ಕಾರ್ಯದರ್ಶಿಯಾಗಿ ಶಾಫೀ ಸಖಾಫಿ ಆಕಲುಬೈಲು, ಕೋಶಾಧಿಕಾರಿಯಾಗಿ ಹಾಜಿ ಅಯ್ಯೂಬ್ ಮುಸ್ಲಿಯಾರ್ ಉಪ್ಪುಂದ, ಉಪ ಸಮಿತಿಗಳಾದ ಪರೀಕ್ಷಾ ವಿಭಾಗ ಅಧ್ಯಕ್ಷರಾಗಿ ಅಬ್ದುಲ್ ರಶೀದ್ ಮದನಿ ಚಾತನಕೆರೆ, ಕಾರ್ಯದರ್ಶಿಯಾಗಿ ಮುಹಮ್ಮದ್ ಹನೀಫ್ ಸಅದಿ ನಾವುಂದ, ಟ್ರೈನಿಂಗ್ ವಿಭಾಗ ಅಧ್ಯಕ್ಷರಾಗಿ ಅಬೂಬಕರ್ ಸಿದ್ದೀಖ್ ಸಖಾಫಿ ಚಾತನಕೆರೆ, ಕಾರ್ಯದರ್ಶಿಯಾಗಿ ಕೊಂಬಾಳಿ ಕೆ.ಎಂ.ಎಚ್. ಝುಹುರಿ ಕೋಯನಗರ, ಮಿಶನರಿ ವಿಭಾಗ ಅಧ್ಯಕ್ಷರಾಗಿ ಅಬ್ಬಾಸ್ ಮದನಿ ಮರವಂತೆ, ಕಾರ್ಯದರ್ಶಿಯಾಗಿ ಅಬ್ದುಲ್ ಜಬ್ಬಾರ್ ಸಖಾಫಿ ಗಂಗೊಳ್ಳಿ, ಕ್ಷೇಮನಿಧಿ ವಿಭಾಗ ಅಧ್ಯಕ್ಷರಾಗಿ ಉಮರುಲ್ ಫಾರೂಖ್ ಸಖಾಫಿ ಬಡಕೆರೆ, ಕಾರ್ಯದರ್ಶಿಯಾಗಿ, ಅನ್ಸಾರ್ ಸಖಾಫಿ ಕೌಂಜೂರು, ಮ್ಯಾಗಝಿನ್ ವಿಭಾಗ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಮದನಿ ಮಾವಿನಕಟ್ಟೆ, ಕಾರ್ಯದರ್ಶಿಯಾಗಿ ಬದ್ರುದ್ದೀನ್ ಝುಹುರಿ ನಾವುಂದ, ಕಾರ್ಯಕಾರಿ ಸದಸ್ಯರಾಗಿ ಎಲ್ಲಾ ಮದ್ರಸಗಳ ಸದರ್ ಮುಅಲ್ಲಿಮರನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿ ಉಮರುಲ್ ಫಾರೂಖ್ ಸಖಾಫಿ ಬಡಾಕೆರೆ ಸ್ವಾಗತಿಸಿ, ಶಾಫೀ ಸಖಾಫಿ ಆಕಳಬೈಲು ವಂದಿಸಿದರು.

ವರದಿ : ಕೊಂಬಾಳಿ ಝುಹುರಿ

error: Content is protected !! Not allowed copy content from janadhvani.com